‘ಗೋಲ್ಡನ್ ಮಿಲ್ಕ್’ ಮಾಡುವ ಸರಿಯಾದ ವಿಧಾನ ಇಲ್ಲಿದೆ; ಉತ್ತಮ ಆರೋಗ್ಯಕ್ಕಾಗಿ ಈ Recipe

blank

ಒಂದು ಚಮಚ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅದು ದೇಹಕ್ಕೆ ವರದಾನವಾಗಿದೆ. ಅರಿಶಿನ ಹಾಲು ಅನೇಕ ದೀರ್ಘಕಾಲದ ಕಾಯಿಲೆಗಳನ್ನು ನಿರ್ಮೂಲನೆ ಮಾಡುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಇದು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅರಿಶಿನ ಹಾಲು ಕುಡಿಯಲು ಉತ್ತಮ ಸಮಯ ಯಾವುದು ಮತ್ತು ಅದನ್ನು ಮಾಡುವ ವಿಧಾನ ಯಾವುದು ಗೊತ್ತಾ?.(Recipe)

ಇದನ್ನು ಓದಿ: ದಿನಕ್ಕೆ 1 ಸಿಗರೇಟ್ ಸೇದುವುದರಿಂದ ಏನಾಗುತ್ತೆ ಗೊತ್ತಾ?; ತಿಳಿದ್ರೆ ನೀವು ಧೂಮಪಾನ ತ್ಯಜಿಸೋದು ಪಕ್ಕಾ | Health Tips

ಅರಿಶಿನ ಹಾಲಿನ ಅಸಂಖ್ಯಾತ ಪ್ರಯೋಜನಗಳ ಕಾರಣ ಇದನ್ನು ‘ಗೋಲ್ಡನ್ ಮಿಲ್ಕ್’ ಎಂದೂ ಕರೆಯುತ್ತಾರೆ. 99ರಷ್ಟು ಜನರಿಗೆ ಇದನ್ನು ಮಾಡುವ ಸರಿಯಾದ ವಿಧಾನ ತಿಳಿದಿಲ್ಲ ಅಥವಾ ಸರಿಯಾದ ಸಮಯಕ್ಕೆ ಕುಡಿಯುವುದಿಲ್ಲ. ಅರಿಶಿನದ ಹೊರತಾಗಿ ಅರಿಶಿನ ಹಾಲಿಗೆ ಅನೇಕ ಇತರ ವಸ್ತುಗಳನ್ನು ಸೇರಿಸಲಾಗುತ್ತದೆ. ಇದರಿಂದಾಗಿ ಪ್ರಯೋಜನಗಳು ಬಹುಪಟ್ಟು ಹೆಚ್ಚಾಗುತ್ತವೆ.

ಅರಿಶಿನ ಹಾಲು ಯಾವಾಗ ಕುಡಿಯಬೇಕು?

ನಿಮಗೆ ಅನುಗುಣವಾಗಿ ಅರಿಶಿನ ಹಾಲನ್ನು ಕುಡಿಯಲು ಸರಿಯಾದ ಸಮಯವನ್ನು ನೀವು ಆಯ್ಕೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ರಾತ್ರಿಯಲ್ಲಿ ಇದನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ದೇಹಕ್ಕೆ ಶಾಂತಿ ಮತ್ತು ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ.

ಪ್ರಯೋಜನವೇನು?

ಅರಿಶಿನದ ಹಾಲನ್ನು ಕುಡಿಯುವುದರಿಂದ ದೇಹವು ಅನೇಕ ಉತ್ಕರ್ಷಣ ನಿರೋಧಕಗಳನ್ನು ಪಡೆಯುತ್ತದೆ. ಇದು ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದು ಮನಸ್ಸಿನ ಗಮನವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಈ ಆರೋಗ್ಯಕರ ಪಾನೀಯವನ್ನು ಕುಡಿಯುವುದರಿಂದ ತಿಂದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಗುಣಲಕ್ಷಣಗಳು ಸೋಂಕನ್ನು ತಡೆಯುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಇದು ಪರಿಣಾಮಕಾರಿದೆ.

ಅರಿಶಿನ ಹಾಲು ಮಾಡುವ ಸರಿಯಾದ ವಿಧಾನ

ಸಾಮಾನ್ಯವಾಗಿ ಜನರು ಅರಿಶಿನ ಹಾಲಿನಲ್ಲಿ ಅರಿಶಿನ ಮತ್ತು ಹಾಲನ್ನು ಮಾತ್ರ ಬಳಸುತ್ತಾರೆ. ಆದರೆ ಇನ್ನೂ ಕೆಲವು ಪದಾರ್ಥಗಳನ್ನು ಸೇರಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ನೀವು ಹಾಲಿನಲ್ಲಿ ಅರಿಶಿನ ಸೇರಿದಂತೆ 4 ವಸ್ತುಗಳನ್ನು ಸೇರಿಸಬೇಕು.

  • 1 ಲೋಟ ಸಿಹಿಗೊಳಿಸದ ಹಾಲು
  • 1 ಚಮಚ ಅರಿಶಿನ ಪುಡಿ
  • ಅರ್ಧ ಚಮಚ ದಾಲ್ಚಿನ್ನಿ ಪುಡಿ
  • ತುರಿದ 1 ಸಣ್ಣ ತುಂಡು ಶುಂಠಿ
  • 1 ಚಿಟಿಕೆ ಕರಿಮೆಣಸಿನ ಪುಡಿ

ಈ ಎಲ್ಲಾ ಪದಾರ್ಥಗಳನ್ನು ಹಾಕಿ 8 ರಿಂದ 10 ನಿಮಿಷ ಕುದಿಸಿ. ಬಳಿಕ ಅರಿಶಿನ ಹಾಲು ಕುಡಿಯಲು ರೆಡಿಯಾಗಿರುತ್ತದೆ.

ರಾತ್ರಿ ಸಮಯದಲ್ಲಿ ಅರಿಶಿನ ಹಾಲು ಕುಡಿಯುವುದರಿಂದ ಆಗುವ ಲಾಭ

ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿದರೆ ಮೊದಲು ಉತ್ತಮ ನಿದ್ದೆ ಬರುತ್ತದೆ. ಈ ಒಂದೇ ಪ್ರಯೋಜನವು ದೇಹಕ್ಕೆ ಎಲ್ಲಾ ಇತರ ಪ್ರಯೋಜನಗಳನ್ನು ನೀಡುತ್ತದೆ. ಇದು ನಿಮ್ಮ ಸ್ನಾಯುಗಳು ಮತ್ತು ಮೂಳೆಗಳಲ್ಲಿನ ನೋವು ಮತ್ತು ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಮೆಮೊರಿ ಮತ್ತು ಫೋಕಸ್ ಶಕ್ತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಹಾಗಲಕಾಯಿ ಕಹಿ ಆದರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನ ಇದೆ ಗೊತ್ತಾ?; ನಿಮಗಾಗಿ Health Tips

Share This Article

Relationship Tips : ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡುತ್ತಿದ್ದೀರಾ? ಈ ರೀತಿಯಲ್ಲಿ ನಿಮ್ಮ ಸಂಬಂಧ ಗಟ್ಟಿ ಮಾಡಿಕೊಳ್ಳಿ…

Relationship Tips : ಪತಿ-ಪತ್ನಿಯರ ನಡುವಿನ ಸಣ್ಣ ಜಗಳಗಳು ಸಮಯದೊಂದಿಗೆ ಪರಿಹರಿಸಲ್ಪಡುತ್ತವೆ, ಇಲ್ಲದಿದ್ದರೆ ಕೆಲವೊಮ್ಮೆ ಉದ್ವಿಗ್ನತೆ…

ಬೇಯಿಸಿದ ಮೊಟ್ಟೆ vs ಆಮ್ಲೆಟ್​… ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Omelette vs Boiled Egg

Omelette vs Boiled Egg : ಮೊಟ್ಟೆಗಳು ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ಪ್ರಮುಖ ಪೋಷಕಾಂಶಗಳ…

ನಿಮ್ಮ ಕಿಡ್ನಿಗಳಿಂದ ವಿಷ ಹೊರಹಾಕಬೇಕೇ? ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಮಿಸ್​ ಮಾಡಲೇಬೇಡಿ | Kidneys Health

Kidneys Health : ಮೂತ್ರಪಿಂಡಗಳು ಅಥವಾ ಕಿಡ್ನಿಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ರಕ್ತ…