

ತಮಿಳುನಾಡು: ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್' ಚಿತ್ರದ ರನ್ಟೈಮ್ ಬಗ್ಗೆ ಇದೀಗ ಹೊಸ ಮಾಹಿತಿ ಲಭ್ಯವಾಗಿದೆ.
ಇತ್ತೀಚಿಗೆ ಲಭ್ಯವಾದ ಮಾಹಿತಿ ಪ್ರಕಾರ, ಚಿತ್ರವು ತನ್ನ ಸೆನ್ಸಾರ್‌ಶಿಪ್ ಪ್ರಕ್ರಿಯೆಯನ್ನು ಯಾವುದೇ ಅಡೆಚಣೆಗಳಿಲ್ಲದೆ ಪೂರ್ಣಗೊಳಿಸಿದೆ ಮತ್ತು ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಇದರೊಟ್ಟಿಗೆ ಚಿತ್ರದ ರನ್ಟೈಮ್ ಅವಧಿ 2 ಗಂಟೆ 49 ನಿಮಿಷಗಳು ಎಂದು ಹೇಳಲಾಗಿದ್ದು, ಒಂದೆಡೆ ಇದು ತಲೈವಾ ಅಭಿಮಾನಿಗಳಿಗೆ ಸಂತಸ ನೀಡಿದರೆ, ಮತ್ತೊಂದೆಡೆ ಬರೋಬ್ಬರಿ 3 ಗಂಟೆಗಳತ್ತ ಸಿನಿಮಾ ಸಾಗಲಿದೆ ಎಂಬುದು ಹಲವರಿಗೆ ಅಶ್ಚರ್ಯವನ್ನು ಉಂಟು ಮಾಡಿದೆ.
ಜೈಲರ್ ಚಿತ್ರವನ್ನು ಇದೇ ಆಗಸ್ಟ್ 10, 2023 ರಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ. ಚಿತ್ರದಲ್ಲಿ ರಜನಿಕಾಂತ್, ತಮನ್ನಾ ಭಾಟಿಯಾ, ಜಾಕಿ ಶ್ರಾಫ್, ಶಿವರಾಜ್‌ಕುಮಾರ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣನ್, ಸುನೀಲ್, ವಸಂತ್ ರವಿ ಮತ್ತು ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾ ಬಳಗವೇ ಅಭಿನಯಿಸಿದೆ,(ಏಜೆನ್ಸೀಸ್).