More

    ತನ್ನ ಅನುಪಸ್ಥಿತಿಯಲ್ಲಿ ಮಗನ ಅಂತ್ಯ ಸಂಸ್ಕಾರ: ಹೆಂಡತಿ ಸೇರಿದಂತೆ 13 ಜನರ ಪ್ರಾಣ ತೆಗೆದ ಸೈನಿಕ

    ಕಾಂಗೋ: ತನ್ನ ಅನುಪಸ್ಥಿತಿಯಲ್ಲಿ ಮಗನ ಅಂತ್ಯ ಸಂಸ್ಕಾರ ಮಾಡಿದ್ದಕ್ಕಾಗಿ ಸೈನಿಕನೊಬ್ಬ 13 ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಈಶಾನ್ಯ ಕಾಂಗೋದಲ್ಲಿ ನಡೆದಿದೆ.

    ಇದನ್ನೂ ಓದಿ: ಇಂಟರ್ನೆಟ್‌ ಬಳಕೆದಾರರಿಗೆ ವಾರ್ನಿಂಗ್: ಅಕಿರಾ ಬಗ್ಗೆ ಹುಷಾರಾಗಿರುವಂತೆ ಸರ್ಕಾರದಿಂದ ಎಚ್ಚರಿಕೆ

    ದಾಳಿ ನಡೆಸಿದ ಯೋಧನ ಗುರುತು ಪತ್ತೆಯಾಗಿಲ್ಲವಾದರೂ ಘಟನೆಯಲ್ಲಿ ಸೈನಿಕನ ಪತ್ನಿ, ಅತ್ತೆ-ಮಾವ, 10 ಮಕ್ಕಳು ಸೇರಿದಂತೆ 13 ಜನರು ಮೃತರಾಗಿದ್ದಾರೆ. ಗುರುವಾರದಂದು ಸಹಜ ಕಾರಣಗಳಿಂದ ಸತ್ತಿದ್ದ ಮಗನಿಗಾಗಿ ಕುಟುಂಬಸ್ಥರು ಮತ್ತು ಸಮುದಾಯದ ಸದಸ್ಯರು ಶೋಕದಲ್ಲಿ ಜಮಾಯಿಸಿದ್ದರು. ಈ ವೇಳೆ ಸೈನಿಕನು ಮತ್ತೊಂದು ಹಳ್ಳಿಯಲ್ಲಿ ಮನೆಗೆ ಬಂದಿದ್ದು, ಅಷ್ಟೋತ್ತಿಗಾಗಲೇ ಮಗನ ಅಂತ್ಯಕ್ರಿಯೆ ನಡೆಸಲಾಗಿತ್ತು.

    ತನ್ನ ಮಗನನ್ನು ಆತನ ಅನುಮೋದನೆಯಿಲ್ಲದೆ ಮತ್ತು ಅವನ ಅನುಪಸ್ಥಿತಿಯಲ್ಲಿ ಸಮಾಧಿ ಮಾಡಿದ್ದನ್ನು ಇಷ್ಟಪಡದ ಸೈನಿಕನು, ಶನಿವಾರ ತಡರಾತ್ರಿ ತನ್ನ ಶಸ್ತ್ರಾಸ್ತ್ರದಿಂದ ನಾಗರಿಕರ ಮೇಲೆ ಗುಂಡಿನ ಮಳೆಗೈದಿದ್ದಾನೆ. ದಾಳಿಯ ನಂತರ ಸ್ಥಳದಿಂದ ಪಲಾಯನ ಮಾಡಿದ ಆತನನ್ನು ಬಂಧಿಸಲು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಸೈನ್ಯದ ತುಕಡಿಯೊಂದನ್ನು ನಿಯೋಜಿಲಾಗಿದೆ.

    ಯಾವುದೇ ಸಂದರ್ಭ ಅಥವಾ ಸಮಯವಿರಲಿ. ಸೈನಿಕನಾದವನು ವ್ಯಕ್ತಿಯ ಜೀವವನ್ನು ತೆಗೆಯಲು ಸಾಧ್ಯವಿಲ್ಲ. ಇದು ಅಶಿಸ್ತಿನ ಕ್ರಮವಾಗಿದ್ದು, ಇದನ್ನು ನ್ಯಾಯಾಲದಲ್ಲಿ ಬಗೆಹರಿಸಿ ಕೊಳ್ಳಲಾಗುಗುವುದು ಎಂದು ಸೇನಾ ವಕ್ತಾರ ನ್ಗೊಂಗೊ ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts