More

    ಇಂಟರ್ನೆಟ್‌ ಬಳಕೆದಾರರಿಗೆ ವಾರ್ನಿಂಗ್: ಅಕಿರಾ ಬಗ್ಗೆ ಹುಷಾರಾಗಿರುವಂತೆ ಸರ್ಕಾರದಿಂದ ಎಚ್ಚರಿಕೆ

    ದೆಹಲಿ: ಪ್ರಮುಖ ಮಾಹಿತಿಯನ್ನು ಕದಿಯುವ ಮತ್ತು ಸುಲಿಗೆಗೆ ಕಾರಣವಾಗುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ “ಅಕಿರಾ” ಎಂಬ ಇಂಟರ್ನೆಟ್ ರಾನ್ಸಮ್‌ವೇರ್ ವಿರುದ್ಧ ಎಚ್ಚರವಾಗಿರುವಂತೆ ಕೇಂದ್ರ ಸರ್ಕಾರವು ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಟೊಮ್ಯಾಟೋ ತಿನ್ನುವುದನ್ನು ಬಿಟ್ಟರೆ ಬೆಲೆ ಕಡಿಮೆಯಾಗುತ್ತದೆ ಎಂದ ಯುಪಿ ಸಚಿವೆ

    ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಕಂಪ್ಯೂಟರ್ ಮಾಲ್‌ವೇರ್ ವಿಂಡೋಸ್ ಮತ್ತು ಲಿನಕ್ಸ್-ಆಧಾರಿತ ಸಿಸ್ಟಮ್‌ಗಳನ್ನು ಗುರಿಯಾಗಿಸುವ “ಅಕಿರಾ” ಕುರಿತು ಸಲಹೆಯನ್ನು ನೀಡಿದೆ. ಮಾಹಿತಿಯನ್ನು ಕದಿಯುವುದರ ಜತೆಗೆ ಸಿಸ್ಟಮ್‌ಗಳಲ್ಲಿನ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿ ಜನರ ಬಳಿ ಸುಲಿಗಾಗಿ ಬೇಡಿಕೆ ಇಡಲಾಗುತ್ತದೆ ಎಂದು ಎಂದು ಸಿಇಆರ್​ಟಿ ಹೇಳಿದ್ದಾರೆ.

    ಒಂದು ವೇಳೆ ಪಾವತಿಸದಿದ್ದಲ್ಲಿ, ಈ ಮಾಹಿತಿಯನ್ನು ತಮ್ಮ ಡಾರ್ಕ್ ವೆಬ್ ಬ್ಲಾಗ್‌ನಲ್ಲಿ ಡೇಟಾವನ್ನು ಬಿಡುಗಡೆ ಮಾಡುತ್ತಾರೆ ಎಂದು ಸಲಹೆ ನೀಡಲಾಗಿದ್ದು, ಇಂತಹ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಂಟರ್ನೆಟ್ ಬಳಕೆದಾರರು ಮೂಲಭೂತ ಆನ್‌ಲೈನ್ ನೈರ್ಮಲ್ಯ ಮತ್ತು ರಕ್ಷಣೆ ಪ್ರೋಟೋಕಾಲ್‌ಗಳನ್ನು ಬಳಸಬೇಕೆಂದು CERT-In ಸೂಚಿಸಿದೆ. ಬಳಕೆದಾರರು ಬಲವಾದ ಪಾಸ್‌ವರ್ಡ್ ನೀತಿಯನ್ನು ಅನುಸರಿಸಬೇಕು ಎಂದು ತಂತ್ರಜ್ಞಾನ ವಿಭಾಗವು ಸಲಹೆ ನೀಡಿದೆ.(ಏಜೆನ್ಸೀಸ್​​)

    ಕುಡಿದ ಮತ್ತಿನಲ್ಲಿದ್ದವನಿಗೆ 38ಕ್ಕೂ ಹೆಚ್ಚು ಬಾರಿ ಬೂಟಿನಿಂದ ಹೊಡೆದ ಕಾನ್ಸ್‌ಟೇಬಲ್​​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts