ಕುಡಿದ ಮತ್ತಿನಲ್ಲಿದ್ದವನಿಗೆ 38ಕ್ಕೂ ಹೆಚ್ಚು ಬಾರಿ ಬೂಟಿನಿಂದ ಹೊಡೆದ ಕಾನ್ಸ್‌ಟೇಬಲ್​​..!

1 Min Read
beat
ಸಾಂದರ್ಭಿಕ ಚಿತ್ರ

ಕೊತ್ವಾಲಿ: ಕುಡಿದ ಮತ್ತಿನಲ್ಲಿದ್ದವನಿಗೆ ಪೊಲೀಸ್ 38 ಬಾರಿ ಶೂನಿಂದ ಹೊಡೆದ ಘಟನೆ ಉತ್ತರ ಪ್ರದೇಶದ ಕೊತ್ವಾಲಿ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಟೊಮ್ಯಾಟೋ ತಿನ್ನುವುದನ್ನು ಬಿಟ್ಟರೆ ಬೆಲೆ ಕಡಿಮೆಯಾಗುತ್ತದೆ ಎಂದ ಯುಪಿ ಸಚಿವೆ

ಹಲ್ಲೆ ನಡೆಸಿದ ಕಾನ್ಸ್‌ಟೇಬಲ್​​ನನ್ನು ದಿನೇಶ್ ಎಂದು ಗುರುತಿಸಲಾಗಿದ್ದು, ಆತ ಕೆಲವು ವಸ್ತುಗಳನ್ನು ಖರೀದಿಸಲು ಸಿವಿಲ್​ ಡ್ರೆಸ್​​ನಲ್ಲಿ ಹೋಗಿದ್ದರು. ಈ ವೇಳೆ ಮಾರುಕಟ್ಟೆಯಲ್ಲಿ ಪಾನಮತ್ತನಾಗಿದ್ದ ಯುವಕನೊಬ್ಬ ನಶೆಯಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ. ಅಲ್ಲದೇ, ಬಲವಂತವಾಗಿ ಅಂಗಡಿಗಳಿಗೆ ನುಗ್ಗಿ ಉಚಿತವಾಗಿ ತಂಪು ಪಾನೀಯ ಸೇವಿಸುತ್ತಿದ್ದ. ಕೂಡಲೇ ಪೇದೆಯನ್ನು ನೋಡಿದ ಜನರು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಇದಾದ ನಂತರ ಕಾನ್ಸ್‌ಟೇಬಲ್ ಯುವಕನಿಗೆ ಗಲಾಟೆ ಮಾಡದಂತೆ ತಡೆಯಲು ಮುಂದಾದಾಗ, ಆತ ಹಲ್ಲೆಗೆ ಯತ್ನಿಸಿದ್ದಾನೆ. ಇದಾದ ನಂತರ ಕಾನ್ಸ್‌ಟೇಬಲ್ ಶೂ ತೆಗೆದು ಯುವಕನಿಗೆ ಥಳಿಸಲು ಆರಂಭಿಸಿದ್ದು, ನಾಲ್ಕು ನಿಮಿಷ 38 ಸೆಕೆಂಡುಗಳಲ್ಲಿ ಕಾನ್ಸ್‌ಟೇಬಲ್ ಮಾದಕ ವ್ಯಸನಿ ಯುವಕನಿಗೆ 38ಕ್ಕೂ ಹೆಚ್ಚು ಬಾರಿ ಶೂಗಳಿಂದ ಹೊಡೆದಿದ್ದಾನೆ. ಬಳಿಕ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಶ್ಚಿಮದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದುರ್ಗೇಶ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಹಲ್ಲೆ ನಡೆಸಿದ ಕಾನ್‌ಸ್ಟೆಬಲ್‌ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ.(ಏಜೆನ್ಸೀಸ್​)

See also  ಎಲ್ಲಿಗೆ ಹೋಗಿದ್ದೆ...ಯಾಕೆ ಸುಮ್ಮನೆ ಓಡಾಡ್ತೀಯ ಎಂದು ಅಡ್ಡಗಟ್ಟಿ ಲಾಠಿ ತೋರಿಸಿದ ಪೊಲೀಸರಿಗೆ ಖಾಲಿ ಚೊಂಬು ತೋರಿಸಿದ ಯುವಕ...
Share This Article