More

    ಫೋನ್​ನಲ್ಲೇ ಮುಳುಗಿದ ಮಹಿಳೆ ಮಗುಗೆ ಏನು ಮಾಡಿದ್ಲು ನೋಡಿ! ಎಲ್ಲ ತಾಯಂದ್ರು ನೋಡ್ಬೇಕಾದ ವಿಡಿಯೋ ಇದು

    ನವದೆಹಲಿ: ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್​ ಜೀವನದ ಒಂದು ಭಾಗವಾಗಿದೆ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಖಂಡಿತಾ ಇದ್ದೇ ಇರುತ್ತದೆ. ಊಟ ಮಾಡುವಾಗ, ಟಾಯ್ಲೆಟ್​ಗೆ ಹೋದಾಗ ಹಾಗೂ ಪ್ರಯಾಣ ಮಾಡುವಾಗ ಕೆಲವರಿಗೆ ಫೋನ್​ ಬೇಕೆ ಬೇಕು. ಫೋನ್​ ಬಿಟ್ಟು ಒಂದು ಗಳಿಗೆಯೂ ಇರುವುದಿಲ್ಲ. ಕೆಲವೊಮ್ಮೆ ವ್ಯಕ್ತಿಯ ಕೈಯಲ್ಲಿ ಫೋನ್​ ಇಲ್ಲದೇ ಹೋದಾಗ ಏನೋ ಕಳೆದುಕೊಂಡಂತೆ ವರ್ತಿಸುತ್ತಾನೆ.

    ಈ ಮೊಬೈಲ್​ಗಳು ಮನುಷ್ಯನ ಜೀವನದಲ್ಲಿ ಹಲವು ಬದಲಾವಣೆಗಳನ್ನು ತಂದಿವೆ. ಇಂದು ತಂತ್ರಜ್ಞಾನ ಪ್ರಗತಿ ಹೊಂದುತ್ತಿದೆ ಎಂದು ಖುಷಿಪಡಬೇಕೋ? ಅಥವಾ ನಾವು ತಂತ್ರಜ್ಞಾನ ಗುಲಾಮರಾಗುತ್ತಿದ್ದೇವೆ ಎಂದು ಬೇಸರಿಸಿಕೊಳ್ಳಬೇಕೋ? ಯಾವುದು ಕೂಡ ಅರ್ಥವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ದಿನಗಳು ಉರುಳಿದಂತೆ ಜನರು ಫೋನ್‌ಗಳಿಗೆ ವ್ಯಸನಿಗಳಾಗುತ್ತಿದ್ದಾರೆ ಮತ್ತು ತಮ್ಮ ನೆರೆಹೊರೆಯವರೊಂದಿಗೆ ಮಾತನಾಡಲು ಸಹ ಸಮಯ ಇಲ್ಲದಂತೆ ಫೋನ್​ನಲ್ಲೇ ಮುಳುಗಿರುತ್ತಾರೆ. ಕೆಲವು ತಾಯಂದಿರಂತೂ ತಮ್ಮ ಫೋನ್‌ಗಳಲ್ಲಿ ಮುಳುಗಿ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸದ ಪ್ರಕರಣಗಳೂ ಆಗಾಗ ಬೆಳಕಿಗೆ ಬರುತ್ತಿವೆ. ಇಂತಹ ಸನ್ನಿವೇಶದ ತಾಜಾ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ಒಂದು ಮನೆಯಲ್ಲಿ ತಾಯಿ, ತಂದೆ ಮತ್ತು ಪುಟ್ಟ ಮಗು ವಾಸವಿದೆ. ಮಗು ಹಾಲ್‌ನಲ್ಲಿ ಆಟವಾಡುತ್ತಿದ್ದಾಗ ತಾಯಿಗೆ ದೂರವಾಣಿ ಕರೆ ಬರುತ್ತದೆ. ಫೋನ್‌ನಲ್ಲಿ ಮಾತನಾಡುತ್ತಾ ತನ್ನ ಕೆಲಸ ಮುಂದುವರಿಸುತ್ತಾಳೆ. ಈ ಸಂದರ್ಭದಲ್ಲಿ ಮಹಿಳೆ ಅಡುಗೆಗಾಗಿ ತರಕಾರಿಗಳನ್ನು ಕತ್ತರಿಸುತ್ತಿರುತ್ತಾಳೆ. ಸಾಕಷ್ಟು ತರಕಾರಿಗಳನ್ನು ಕತ್ತರಿಸಿ ಉಳಿದಿದ್ದನ್ನು ಫ್ರಿಡ್ಜ್​ನಲ್ಲಿ ಇಡಲು ಬಯಸುತ್ತಾಳೆ. ಆದರೆ, ಫೋನಿನಲ್ಲಿ ಮಾತನಾಡುತ್ತಾ ಮಗ್ನಳಾದ ತಾಯಿ, ಫ್ರಿಡ್ಜ್​ನಲ್ಲಿ ತರಕಾರಿ ಬದಲು ಮಗುವನ್ನು ಇಟ್ಟು ಬಾಗಿಲು ಹಾಕಿ, ಫೋನ್​ನಲ್ಲಿ ಮಾತು ಮುಂದುವರಿಸುತ್ತಾಳೆ. ಇದಾದ ಬಳಿಕ ಮಗುವಿನ ತಂದೆ ಸ್ನಾನ ಮಾಡಿ ಹಾಲ್ ಒಳಗೆ ಬರುತ್ತಾನೆ. ಆದರೆ, ಅಲ್ಲಿ ಮಗು ಇರುವುದಿಲ್ಲ. ಮಗು ಎಲ್ಲಿ ಎಂದು ಪ್ರಶ್ನೆ ಮಾಡುತ್ತಾನೆ. ಎಲ್ಲಿ ನೋಡಿದರೂ ಸಿಗುವುದಿಲ್ಲ. ಅದೇ ವೇಳೆಗೆ ಪುಟ್ಟ ಮಗುವಿನ ಅಳು ಕೇಳಿಸುತ್ತದೆ. ಅಳುವ ಸದ್ದು ಎಲ್ಲಿಂದ ಬರುತ್ತಿದೆ ಎಂದು ನೋಡಿದ ತಂದೆ ಫ್ರಿಡ್ಜ್​ನಿಂದ ಬರುತ್ತಿರುವುದನ್ನು ಗಮನಿಸಿ, ಬಾಗಿಲು ತೆರೆದಾಗ ಅದರಲ್ಲಿ ಮಗು ಇರುವುದನ್ನು ನೋಡಿ ಶಾಕ್​ ಆಗುತ್ತಾನೆ. ಬಳಿಕ ಮಗುವನ್ನು ಫ್ರಿಡ್ಜ್​ನಿಂದ ಹೊರಗೆ ಎತ್ತುಕೊಂಡು ಹೆಂಡತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ.

    ವಿಡಿಯೋ ಹಿಂದಿದೆ ಟ್ವಿಸ್ಟ್​
    ಈ ವಿಡಿಯೋದಲ್ಲಿ ತಾಯಿ ಮೊಬೈಲ್​ಗೆ ಎಷ್ಟು ಅಡಿಕ್ಟ್ ಆಗಿದ್ದಾಳೆ ಎಂಬುದು ಗೊತ್ತಾಗುತ್ತದೆ. ಫೋನಿನಲ್ಲಿ ಮುಳುಗಿದ ಆಕೆಗೆ ತಾನು ಏನು ಮಾಡುತ್ತಿದ್ದೇನೆ ಅಂತಾನೂ ಅರ್ಥವಾಗದೆ ಮಗುವಿನ ಬಗ್ಗೆ ಎಷ್ಟು ನಿಷ್ಕಾಳಜಿ ತೋರಿದ್ದಾಳೆ. ಆದರೆ, ಈ ವಿಡಿಯೋ ಹಿಂದಿರುವ ಟಿಸ್ಟ್​ ಏನೆಂದರೆ, ಈ ವಿಡಿಯೋದಲ್ಲಿ ನಡೆದಿರುವುದು ನಿಜವಾಗಿ ನಡೆದದ್ದಲ್ಲ. ಬದಲಾಗಿ ಈಗಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ತೋರಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ಈ ವಿಡಿಯೋ ನೋಡಿ ಮೊಬೈಲ್ ಚಟಕ್ಕೆ ಬಿದ್ದಿರುವ ತಾಯಂದಿರು ಇನ್ಮುಂದೆ ಹುಷಾರಾಗಿರಲಿ ಎಂಬುದು ಈ ವಿಡಿಯೋದ ಉದ್ದೇಶ. ಮೊಬೈಲ್ ಚಟ ತುಂಬಾ ಅಪಾಯಕಾರಿ ಎಂದು ಎಲ್ಲರೂ ತಿಳಿದಿರುವುದು ಒಳ್ಳೆಯದು. (ಏಜೆನ್ಸೀಸ್​)

    ಹುಳುಕು ಹಲ್ಲನ್ನು ಪತ್ತೆಹಚ್ಚಿ ಕೀಳುವ ಗಿಳಿ! 9 ಕೋಟಿ ವೀಕ್ಷಣೆ ಕಂಡ ಈ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts