

ಗಂಗೊಳ್ಳಿ: ಶ್ರೀ ಪಂಜುರ್ಲಿ ದೈವಸ್ಥಾನ ಹಿತ್ಲುಗದ್ದೆಮನೆ ಬಂದರು ಗಂಗೊಳ್ಳಿ ನಾಗ ದೇವರು, ಅಮ್ಮನವರ ಹಾಗೂ ಪಂಜುರ್ಲಿ ಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂಗಳವಾರ ನೆರವೇರಿತು.
ಸೋಮವಾರ ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಂಡಿದ್ದು, ನಾಗ ದೇವರ ಬನದಲ್ಲಿ ನವಗ್ರಹ ಹೋಮ, ಪ್ರತಿಷ್ಠಾಧಿವಾಸ ಹೋಮ, ಪ್ರತಿಷ್ಠಾಪನೆ, ಕಲಶಾಭಿಷೇಕ, ಸಂಜೆ ಶ್ರೀ ಅಮ್ಮನವರ ಮತ್ತು ಶ್ರೀ ಪಂಜುರ್ಲಿ ಪರಿವಾರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಮಂಗಳವಾರ ಬೆಳಗ್ಗೆ ಶ್ರೀ ಅಮ್ಮನವರು, ಪಂಜುರ್ಲಿ ಮತ್ತು ಪರಿವಾರ ಸಾನ್ನಿಧ್ಯದಲ್ಲಿ 108 ಕಲಶ ಸ್ಥಾಪನೆ, ಕಲಾತತ್ವಹೋಮ, ಪ್ರಾಯಶ್ಚಿತ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಪುರೋಹಿತರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಜರುಗಿತು.