ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ! ರಾಜ್​ಕುಮಾರ್​ ಬರ್ತ್​ಡೇ ವಿಷ್​ ಮಾಡಿದ ಆರ್​ಸಿಬಿ

rcb
Published on

ಬೆಂಗಳೂರು: ಸದ್ಯ ಐಪಿಎಲ್​ ಹಬ್ಬ ನಡೆಯುತ್ತಿದೆ. ಆರ್​ಸಿಬಿ ತಂಡ ನಾಲ್ಕಕ್ಕೆ ನಾಲ್ಕೂ ಪಂದ್ಯವನ್ನು ಗೆದ್ದು, ಅಭಿಮಾನಿಗಳ ಈ ಬಾರಿ ಕಪ್​ ನಮ್ದೇ ಸಾಲಿಗೆ ತಕ್ಕನಾಗಿ ನಡೆದುಕೊಳ್ಳುತ್ತಿದೆ. ಇದೇ ಸಮಯದಲ್ಲಿ ವರನಟ ಡಾ.ರಾಜ್​ಕುಮಾರ್​ ಜನ್ಮ ದಿನಾಚರಣೆಯೂ ಬಂದಿದ್ದು, ಆರ್​ಸಿಬಿ ಕೂಡ ರಾಜ್​ಕುಮಾರ್​ ಅವರನ್ನು ಸ್ಮರಿಸಿದೆ.


"ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ." ನಟಸಾರ್ವಭೌಮ ಡಾ|| ರಾಜ್ ಕುಮಾರ್ ಅವರ 92ನೆ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ಟ್ವೀಟ್​ ಮಾಡುವ ಮೂಲಕ ಕರ್ನಾಟಕದ ಶ್ರೇಷ್ಠ ನಟನನ್ನು ನೆನಪಿಸಿಕೊಂಡಿದೆ.
ಆರ್​ಸಿಬಿಯ ಈ ಟ್ವೀಟ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಕನ್ನಡದಲ್ಲೇ ವಿಷ್​ ಮಾಡಿರುವುದನ್ನು ಅನೇಕರು ಕೊಂಡಾಡಿದ್ದಾರೆ.


ಭಾನುವಾರದಂದು ಆರ್​ಸಿಬಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದೊಂದಿಗೆ ಮೈದಾನಕ್ಕಿಳಿಯಲಿದೆ. ಆರ್​ಸಿಬಿ ಸತತ ಐದನೇ ಗೆಲುವನ್ನು ತನ್ನದಾಗಿಸಿಕೊಳ್ಳುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net