RCB ಅಭಿಮಾನಿಗಳ ಸಾವು ಪ್ರಕರಣ; ವಿಚಾರಣೆ ಜೂ.10ಕ್ಕೆ ನಿಗದಿಪಡಿಸಿದ ಹೈಕೋರ್ಟ್​

ವಿಜಯವಾಣಿ (20)
Published on

Bengaluru stampede: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೊರ್ಟ್​ ಇಂದು (ಜೂನ್​ 05) ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ದಾಖಲಿಸಿತು. ಅಂತೆಯೇ ವಿಚಾರಣೆ ನಡೆಸಿದ ಕೋರ್ಟ್​, ಇದೀಗ ವಿಚಾರಣೆಯನ್ನು ಜೂ.10ಕ್ಕೆ ನಿಗದಿಪಡಿಸಿದೆ.

ಇಂದು ಮಧ್ಯಾಹ್ನ ವಿಚಾರಣೆಯನ್ನು ನಡೆಸಿದ ಹೈಕೋರ್ಟ್​, ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಕೇಳಿದೆ. ಇದೀಗ ವಿಚಾರಣೆಯನ್ನು ಜೂ.10ಕ್ಕೆ ನಿಗದಿಪಡಿಸಿರುವ ನ್ಯಾಯಾಲಯ, ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಕಾಲ್ತುಳಿತಕ್ಕೆ 11 ಬಲಿ!

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ದ್ವಾರಗಳಲ್ಲಿ ನಡೆದ ಕಾಲ್ತುಳಿತದಲ್ಲಿ ಒಟ್ಟು ಹನ್ನೊಂದು ಅಭಿಮಾನಿಗಳು ಸಾವನ್ನಪ್ಪಿದ್ದು, 47 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮೃತರನ್ನು ಎ.ಎಸ್. ದಿವ್ಯಾಂಶಿ (13), ದೊರೆಶ (32), ಭೂಮಿಕ್ (20), ಸಹನಾ (25), ಅಕ್ಷತಾ (27), ಮನೋಜ್ (33), ಶ್ರವಣ್ (20), ದೇವಿ (29), ಶಿವಲಿಂಗ (17) ಮತ್ತು ಚಿನ್ಮಯಿ (19) ಮತ್ತು ಪ್ರಜ್ವಲ್ (20) ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net