

ಮೊಹಾಲಿ: ನಾಯಕ ವಿರಾಟ್ ಕೊಹ್ಲಿ, ಫಾಪ್ ಡು ಪ್ಲೆಸಿಸ್ ಭರ್ಜರಿ ಆರಂಭಿಕ ಜೊತೆಯಾಟ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಬಿಗಿ ಬೌಲಿಂಗ್ ದಾಳಿಯ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಎದುರು 24 ರನ್ಗಳ ಜಯ ಸಾಧಿಸಿದೆ.
ಪಂಜಾಬ್ನ ಮೊಹಾಲಿ ಅಲ್ಲಿರುವ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ RCB 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು.
ಟಾಸ್ ಸೊತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ಹಂಗಾಮಿ ನಾಯಕ ವಿರಾಟ್ ಕೊಹ್ಲಿ(59 ರನ್, 47 ಎಸೆತ, 5 ಬೌಂಡರಿ, 1 ಸಿಕ್ಸರ್), ಗಾಯದ ಸಮಸ್ಯೆ ನಡುವೆಯೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಫಾಪ್ ಡು ಪ್ಲೆಸಿಸ್(84 ರನ್, 56 ಎಸೆತ, 5 ಬೌಂಡರಿ, 5 ಸಿಕ್ಸರ್) ಬಿರುಸಿನ ಆಟದ ಫಲವಾಗಿ ಮೊದಲ ವಿಕೆಟ್ಗೆ 16.1 ಓವರ್ಗಳಲ್ಲಿ 137 ರನ್ ಗಳಿಸಿ ಬೇರ್ಪಟ್ಟಿತ್ತು.
ನಾಯಕ ಕೊಹ್ಲಿ ಹಾಗೂ ಪ್ಲೆಸಿಸ್ ಬೇರ್ಪಟ್ಟ ಬಳಿಕ ಬಂದ ಬ್ಯಾಟ್ಸ್ಮ್ಯಾನ್ಗಳು ಸ್ಪೋಟಕ ಆಟದ ಫಲವಾಗಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174ರನ್ ಗಳಿಸಿತ್ತು.
ಗುರಿ ಬೆನ್ನತ್ತಿದ್ದ ಡೆಲ್ಲಿಕ್ಯಾಪಿಟಲ್ಸ್ ತಂಡಕ್ಕೆ RCB ಬೌಲರ್ಗಳು ಪಂಜಾಬ್ ಬ್ಯಾಟ್ಸ್ಮ್ಯಾನ್ಗಳಿಗೆ ಕಡಿವಾಣ ಹಾಕಿದರು. ಅಲ್ಪಮೊತ್ತಕ್ಕೆ ತಂಡ ಕುಸಿಯುವ ಭೀತಿಯಲ್ಲಿದ್ದಾಗ ಆರಂಭಿಕ ಪ್ರಭ್ಸಿಮ್ರಾನ್ ಸಿಂಗ್(46 ರನ್, 30 ಎಸೆತ, 3 ಬೌಂಡರಿ, 4 ಸಿಕ್ಸರ್), ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ಜಿತೇಶ್ ಶರ್ಮಾ(41 ರನ್, 27 ಎಸೆತ, 2 ಬೌಂಡರಿ, 3 ಸಿಕ್ಸರ್) ಫಲವಾಗಿ ಪಂಜಾಬ್ ಕಿಂಗ್ಸ್ ತಂಡವು 18.2 ಓವರ್ಗಳಲ್ಲಿ 150ರನ್ಗಳಿಗೆ ಆಲೌಟ್ ಆಯಿತು.
RCBಪರ ಮೊಹಮ್ಮದ್ ಸಿರಾಜ್(4-0-21-4), ವನ್ನಿಂದು ಹಸರಂಗಾ(4-0-39-2), ವೇಯ್ನ್ ಪಾರ್ನೆಲ್(3-0-32-1), ಹರ್ಷಲ್ ಪಟೇಲ್(3.2-0-22-1) ರನ್ ನೀಡಿ ಎದುರಾಳಿ ಬ್ಯಾಟ್ಸ್ಮ್ಯಾನ್ಗಳ ವಿಕೆಟ್ ಪಡೆದಿದ್ದಾರೆ.