ಆರ್‌ಸಿಬಿಗೆ ವಸಿಷ್ಠ ಜೈ ... ‘ಆರ್‌ಸಿ ಬ್ರದರ್ಸ್‌’ತಂಡದಿಂದ ಹಾಡಿನ ಗಿಫ್ಟ್​

RC Brothers - Final
Published on

ಬೆಂಗಳೂರು: ಐಪಿಎಲ್ ಶುರುವಾಗಿದೆ. ಆರ್‌ಸಿಬಿಯ ಮೊದಲ ಪಂದ್ಯ ಸಹ ಮುಗಿದಿದೆ. ತಂಡಕ್ಕೆ ಉತ್ತೇಜನ ತುಂಬುವುದಕ್ಕೆ ಹಲವರು ವಿಡಿಯೋ ಸಾಂಗ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈಗ ಕುರಿ ಪ್ರತಾಪ್ ಮತ್ತು ತಬಲಾ ನಾಣಿ ಅಭಿನಯಿಸಿರುವ ‘ಆರ್‌ಸಿ ಬ್ರದರ್ಸ್‌’ ಚಿತ್ರತಂಡದವರು ಸಹ ಆರ್‌ಸಿಬಿಗೆ ಹಾಡು ಮುಡಿಪಾಗಿಟ್ಟಿದ್ದಾರೆ.

‘ರೆಡ್ಡು ಫ್ಲಾಗ್​ ಹಿಡಿದುಕೊಂಡು ವರ್ಷ ಪೂರ್ತಿ ಕಾಯ್ತಿರ್ತೀವಿ, ಕಪ್ಪು ನಮ್ದು ಅಂದುಕೊಂಡು ಊರ ತುಂಬ ಮೆರಿತಿರ್ತೀವಿ ...’ ಎಂಬ ಹಾಡು ಯೂಟ್ಯೂಬ್‌ನ ಎಆರ್‌ಸಿ ಮ್ಯೂಸಿಕ್ ಕನ್ನಡ ಚಾನಲ್‌ನಲ್ಲಿ ಭಾನುವಾರ ಬಿಡುಗಡೆಯಾಗಿದೆ. ಈ ಹಾಡನ್ನು ವಸಿಷ್ಠ ಸಿಂಹ ಹಾಡಿದ್ದು, ‘ಬಹದ್ದೂರ್’ ಚೇತನ್ ಬರೆದಿದ್ದಾರೆ. ಇನ್ನು, ಪ್ರದೀಪ್ ವರ್ಮಾ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.

‘ಆರ್‌ಸಿ ಬ್ರದರ್ಸ್‌’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೊಂದು ಹಾಡು ಬಾಕಿ ಇದೆಯಂತೆ. ಇದು ತಬಲಾ ನಾಣಿ ಅಭಿನಯದ 125ನೇ ಚಿತ್ರವಾಗಿದ್ದು, ಇದೊಂದು ಅಣ್ಣ-ತಮ್ಮನ ಬಾಂಧವ್ಯದ ಕಥೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್. ಕುರಿ ಪ್ರತಾಪ್ ಮತ್ತು ನಾಣಿ ಜತೆಗೆ ‘ಕಾಮಿಡಿ ಕಿಲಾಡಿಗಳು’ ನಯನಾ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಮಣಿ ಶಶಾಂಕ್ ಮತ್ತು ಸಹನಾ ಗಿರೀಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಿರಣ್ ಕುಮಾರ್ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net