More

    ಯಶ್​ಗೆ ಜೋಡಿ ಆಗ್ತಾರಾ ಮಾಳವಿಕಾ?; ನರ್ತನ್ ಚಿತ್ರಕ್ಕೆ ನಾಯಕಿ ಸಿಕ್ಕಳಂತೆ …

    ಬೆಂಗಳೂರು: ಯಶ್ ಅಭಿನಯದ ಮುಂದಿನ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಕುತೂಹಲ ಇನ್ನೂ ತಣ್ಣಗಾಗಿಲ್ಲ. ಆದರೆ, ‘ಮಫ್ತಿ’ ಖ್ಯಾತಿಯ ನರ್ತನ್ ನಿರ್ದೇಶನದ ಹೊಸ ಚಿತ್ರದಲ್ಲಿ ಯಶ್ ನಟಿಸುವುದು ಅಧಿಕೃತ ಎಂದೇ ಹೇಳಲಾಗುತ್ತಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಈ ಚಿತ್ರಕ್ಕೆ ನಾಯಕಿಯೂ ಆಯ್ಕೆಯಾಗಿದ್ದಾರಂತೆ. ಹಿಂದಿ ಮತ್ತು ದಕ್ಷಿಣ ಭಾಷೆಯ ಚಿತ್ರರಂಗಳಲ್ಲಿ ಗುರುತಿಸಿಕೊಂಡಿರುವ ಮಾಳವಿಕಾ ಮೋಹನ್, ಯಶ್​ಗೆ ಜೋಡಿಯಾಗಲಿದ್ದಾರಂತೆ!

    ಈ ಹಿಂದೆ ನಿರ್ದೇಶಕ ನರ್ತನ್ ಹೇಳಿಕೊಂಡಂತೆ, ಸ್ಕ್ರಿಪ್ಟ್ ಕೆಲಸಗಳನ್ನು ಬಹುತೇಕ ಮುಗಿಸಿಕೊಂಡಿದ್ದಾರೆ. ಇನ್ನೇನು ಯಶ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಕೆಲಸ ಪ್ರಾರಂಭವಾಗಲಿದೆ ಎಂದಿದ್ದರು. ಇದೀಗ ಕೆಲ ಮೂಲಗಳ ಪ್ರಕಾರ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಯಶ್ ಹುಟ್ಟುಹಬ್ಬದ (ಜನವರಿ 8) ಸಂದರ್ಭದಲ್ಲಿ ಚಿತ್ರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆಯಂತೆ.

    ಹಾಗಾದರೆ, ಈ ಚಿತ್ರದ ನಿರ್ವಪಕರು ಯಾರು? ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ಜೀ ಸಿನಿಮಾಸ್ ಸಂಸ್ಥೆ, ತೆಲುಗಿನ ಖ್ಯಾತ ನಿರ್ವಪಕ ವಿಷ್ಣು ಇಂದೂರಿ, ಬಂಡವಾಳ ಹೂಡಲಿದ್ದಾರೆ ಎನ್ನಲಾಗಿತ್ತು. ಬಳಿಕ ಸ್ವತಃ ಯಶ್ ತಮ್ಮದೆ ಪ್ರೊಡಕ್ಷನ್ ಹೌಸ್ ಮೂಲಕ ಚಿತ್ರ ಹೊರತರಲಿದ್ದಾರೆ ಎನ್ನಲಾಗಿತ್ತು. ಸದ್ಯಕ್ಕೆ ಆ ಪ್ರಶ್ನೆಗೆ ಉತ್ತರವಿನ್ನೂ ನಿಗೂಢ!

    ಒಂದು ವೇಳೆ ಸಿನಿಮಾ ಸೆಟ್ಟೇರಿದರೂ, ಏ. 14ರಂದು ‘ಕೆಜಿಎಫ್ 2‘ ಬಿಡುಗಡೆ ಆದ ಬಳಿಕವಷ್ಟೇ ಹೊಸ ಸಿನಿಮಾದಲ್ಲಿ ಯಶ್ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ರೈಲು-ಟಿಪ್ಪರ್ ಭೀಕರ ಆ್ಯಕ್ಸಿಡೆಂಟ್​; ಅಪಘಾತಕ್ಕೆ ಕಾರಣ ಗೂಗಲ್​!?

    ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ; ಪ್ರತಿಭಟನಾನಿರತ ವಿದ್ಯಾರ್ಥಿನಿಗೆ ಡಿಸಿ ಬುದ್ಧಿವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts