ಭಾರತಕ್ಕೆ ಯುಕೆಯಿಂದ ನೂರು ಟನ್​ ಚಿನ್ನ.. ಹಳದಿ ಲೋಹ ಸಂಗ್ರಹಕ್ಕೆ ಆರ್​ಬಿಐ ಮುಂದಾಗಿರುವುದರ ಹಿಂದಿದೆ ಬಲವಾದ ಕಾರಣ !

ನವದೆಹಲಿ: ಭಾರತೀಯ ರಿಜರ್ವ್ ಬ್ಯಾಂಕ್​ ಸುಮಾರು 100 ಟನ್ ಚಿನ್ನವನ್ನು ಸಂಗ್ರಹಿಸಲು ಮುಂದಾಗಿದೆ. ಯುನೈಟೆಡ್​ ಕಿಂಗ್​ಡಮ್​(ಯುಕೆ)ಯಿಂದ ಶೀಘ್ರದಲ್ಲೇ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ‘ನೀವು ನಿಜವಾದ ನಾಯಕಿ, ರೋಲ್ ಮಾಡೆಲ್’: ಮೇಜರ್ ರಾಧಿಕಾಗೆ ಗುಟೆರೆಸ್ ಶ್ಲಾಘನೆ

ಬಂಗಾರ ಸಂಗ್ರಹಿಸುವ ಯೋಜನೆ ದೇಶ ಆರ್ಥಿಕವಾಗಿ ಸದೃಢವಾಗುತ್ತಿರುವುದರ ಸಂಕೇತವಾಗಿದ್ದು, ಹಲವು ದೇಶಗಳು ದಿವಾಳಿಯಾಗುತ್ತಿರುವ ಈ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.

1991ರಲ್ಲಿ ಚಂದ್ರಶೇಖರ್​ ಪ್ರಧಾನ ಮಂತ್ರಿಯಾಗಿದ್ದಾಗ ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಒಳಗಾಗಿದ್ದರಿಂದ ಆರ್​ಬಿಐ ತನ್ನ ಬಳಿ ಸಂಗ್ರಹಿಸಿದ್ದ ಚಿನ್ನವನ್ನು ಒತ್ತೆ ಇಟ್ಟಿತ್ತು. ಆಗ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಅಲ್ಲಿಂದೀಚೆಗೆ ಭಾರತ ಇಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ಸಂಗ್ರಹಿಸುತ್ತಿರುವುದು ಇದೇ ಮೊದಲು.

ಇನ್ನು ಚಿನ್ನದ ಸಾಗಾಣಿಕೆಗೆ ಆರ್​ಬಿಐ ವಿಮಾನಗಳನ್ನು ಬಳಸಿದ್ದು,ಬ ಮುಂಬೈನ ಮಿಂಟ್ ರಸ್ತೆಯಲ್ಲಿರುವ ಆರ್‌ಬಿಐನ ಹಳೆಯ ಕಚೇರಿ ಕಟ್ಟಡ ಮತ್ತು ನಾಗ್ಪುರದಲ್ಲಿರುವ ಕಮಾನುಗಳಲ್ಲಿ ಚಿನ್ನವನ್ನು ಸಂಗ್ರಹಿಸಲಾಗುತ್ತದೆ. ಆರ್‌ಬಿಐ ಕೆಲವು ವರ್ಷಗಳ ಹಿಂದೆ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತು.

ಸಾಗರೋತ್ತರದಲ್ಲಿ ದಾಸ್ತಾನು ಹೆಚ್ಚುತ್ತಿರುವ ಕಾರಣ, ಸ್ವಲ್ಪ ಚಿನ್ನವನ್ನು ಭಾರತಕ್ಕೆ ಪಡೆಯಲು ನಿರ್ಧರಿಸಲಾಯಿತು ಎಂದು ಆರ್​ಬಿಐನ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.

ಇದು ಭಾರತದ ಆರ್ಥಿಕತೆಯ ಬಲವನ್ನು ತೋರಿಸುತ್ತದೆ ಮತ್ತು 1991 ರ ಪರಿಸ್ಥಿತಿಗೆ ತೀವ್ರ ವ್ಯತಿರಿಕ್ತವಾಗಿದೆ ಎಂದು ಮೂಲವೊಂದು ಹೇಳಿದೆ.

ಅನೇಕ ಕೇಂದ್ರೀಯ ಬ್ಯಾಂಕುಗಳಿಗೆ, ಬ್ಯಾಂಕ್ ಆಫ್ ಇಂಗ್ಲೆಂಡ್ ಸಾಂಪ್ರದಾಯಿಕವಾಗಿ ಚಿನ್ನ ಇರಿಸಲು ಭಂಡಾರವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತವು ಇದಕ್ಕೆ ಹೊರತಾಗಿಲ್ಲ, ಸ್ವಾತಂತ್ರ್ಯದ ಮೊದಲು ಲಂಡನ್‌ನಲ್ಲಿ ಚಿನ್ನವನ್ನು ಇರಿಸಲಾಗುತ್ತಿತ್ತು.

ಆರ್‌ಬಿಐ 822.1 ಟನ್ ಚಿನ್ನವನ್ನು ಹೊಂದಿದ್ದು, ಮಾರ್ಚ್ ಅಂತ್ಯದ ವೇಳೆಗೆ 413.8 ಟನ್‌ ಬಂಗಾರವನ್ನು ವಿದೇಶದಲ್ಲಿ ಸಂಗ್ರಹಿಸಲಾಗಿದೆ ಎಂದು ಡೇಟಾ ತೋರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನವನ್ನು ಖರೀದಿಸಿದ ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಆರ್‌ಬಿಐ ಕೂಡ ಒಂದಾಗಿದೆ, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್‌ ತನ್ನ ಸಂಗ್ರಹಣೆಗೆ ಸೇರಿಸಿದೆ.

ಆರ್​ಬಿಐ ಕಳೆದವರ್ಷಕ್ಕೆ ಹೋಲಿಸಿದರೆ 2024ರ ಜನವರಿಯಿಂದ ಏಪ್ರಿಲ್ ತನಕ 1.5 ಪಟ್ಟು ಹೆಚ್ಚು ಚಿನ್ನವನ್ನು ಖರೀದಿಸಿದೆ. ಇದು ಸವಾಲಿನ ಸಮಯದಲ್ಲಿ ಮೀಸಲು ಕಾರ್ಯತಂತ್ರದ ಭಾಗವಾಗಿದೆ ಎಂದು ಪರಿಗಣಿಸಲಾಗಿದೆ.

ಕೇರಳಕ್ಕೆ ಒಂದು ದಿನ ಮುಂಚಿತವಾಗಿ ಆಗಮಿಸಿದ ಮುಂಗಾರು.. ಈಶಾನ್ಯ ಭಾರತದಲ್ಲೂ ಮುಂದುವರಿದ ಮಳೆ!

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…