ಸ್ಟಾರ್‌ ಚಿಹ್ನೆ ಹೊಂದಿರುವ ಬ್ಯಾಂಕ್‌ ನೋಟ್‌ಗಳು ಕಾನೂನುಬದ್ಧವಾಗಿವೆ: ಆರ್​ಬಿಐ

rs
Published on

ನವದೆಹಲಿ: ಸ್ಟಾರ್‌ (*) ಚಿಹ್ನೆ ಇರುವ ಬ್ಯಾಂಕ್‌ ನೋಟುಗಳು ನಕಲಿ ಎನ್ನುವ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ನಡುವೆ ಆರ್‌ಬಿಐ ಈ ಸ್ಪಷ್ಟನೆ ನೀಡಿದೆ. ಸ್ಟಾರ್‌ ಚಿಹ್ನೆ ಹೊಂದಿರುವ ನೋಟುಗಳು ಕಾನೂನುಬದ್ಧವಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಬೇರೆಲ್ಲ ನೋಟುಗಳಲ್ಲಿ ಸಾಮಾನ್ಯವಾಗಿ ಮೂರು ಅಕ್ಷರಗಳ ಬಳಿಕ ನಂಬರ್‌ಗಳಿದ್ದರೆ, ಸ್ಟಾರ್‌ ಚಿಹ್ನೆಯ ನೋಟುಗಳಲ್ಲಿ ಸೀರಿಯಲ್‌ ನಂಬರ್‌ಗೂ ಮುನ್ನ ಸ್ಟಾರ್‌ ಚಿಹ್ನೆ ಇದೆ. ಈ ನೋಟುಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಅನುಮಾನ ವ್ಯಕ್ತಪಡಿಸಿದರು.

ಕಾರಣ: ದೋಷಪೂರಿತವಾಗಿ ಮುದ್ರಿತವಾದ ನೋಟುಗಳ ಬದಲಿಯಾಗಿ ಇದನ್ನು ಪ್ರಿಂಟ್‌ ಮಾಡಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ನಕ್ಷತ್ರ ಚಿಹ್ನೆಯು ನೋಟುಗಳ ಅರ್ಥ, ಅದನ್ನು ಪ್ರಿಟಿಂಗ್‌ ವೇಳೆ ಬದಲಿ ಮಾಡಿದ ಅಥವಾ ಮರುಮುದ್ರಣ ಮಾಡಿದ ನೋಟು ಎಂದು ಗುರುತಿಸುತ್ತದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಿಂಟಿಗ್‌ ಮಾಡುವಾಗ ದೋಷವಾದಾಗ ಅಥವಾ ತಪ್ಪಾಗಿ ಪ್ರಿಂಟ್‌ ಆದಾಗ ಅಂಥಾ ನೋಟುಗಳ ಮರುಮುದ್ರಣ ಮಾಡಲಾಗುತ್ತದೆ. ಆದರೆ, ಅದೇ ಸೀರಿಯಲ್‌ ನಂಬರ್‌ಗಳ ಮುನ್ನ ಸ್ಟಾರ್‌ ಚಿಹ್ನೆ ಹಾಕಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

100 ಸರಣಿ ಸಂಖ್ಯೆಯ ಕರೆನ್ಸಿ ನೋಟುಗಳ ಪ್ಯಾಕೆಟ್‌ನಲ್ಲಿ ದೋಷಯುಕ್ತವಾಗಿ ಮುದ್ರಿತ ನೋಟುಗಳಿಗೆ ಬದಲಿಯಾಗಿ ಬಳಸಲಾಗುವ ಬ್ಯಾಂಕ್‌ನೋಟಿನ ಸಂಖ್ಯೆಯ ಪ್ಯಾಕೆಟ್‌ನಲ್ಲಿ ನಕ್ಷತ್ರ ಚಿಹ್ನೆಯ ನೋಟ್‌ಗಳನ್ನು ಸೇರಿಸಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net