

ನವದೆಹಲಿ: ಶೂ ಖರೀದಿಸುವಾಗ, ನೋಡಲು ಚೆನ್ನಾಗಿರಬೇಕು, ಬಾಳಿಕೆ ಬರಬೇಕು ಆದ್ರೆ ಬೆಲೆ ಕಮ್ಮಿ ಇರಬೇಕು ಎಂದು ಪ್ರತಿಯೊಬ್ಬರು ಯೋಚಿಸುತ್ತೇವೆ. ಆದರೆ ಇಲ್ಲೊಬ್ಬ ಮಾತ್ರ ದುಬಾರಿ ಬೆಲೆ ಕೊಟ್ಟು ಶೂ ಖರೀದಿಸಿ ಸುದ್ದಿಯಾಗಿದ್ದಾನೆ.
ನೋಡೋಕೆ ಶೂ ಚೆನ್ನಾಗಿದ್ರೂ ಅದ್ರ ಬೆಲೆ ನೋಡಿ ನಾವು ಖರೀದಿ ಮಾಡುತ್ತೇವೆ. ಬರೀ ಒಂದು ಶೂಗೆ 4 ಲಕ್ಷ ರೂಪಾಯಿ ಅಂದ್ರೆ ಶಾಕ್ ಆಗೇ ಆಗುತ್ತೆ. ಮಗ ನೀಡಿದ ಶೂ ಬೆಲೆ ಕೇಳಿದ ಈ ತಂದೆ ದಿಗ್ಬ್ರಮೆಗೊಂಡಿದ್ದಾನೆ.
ಯೂಟ್ಯೂಬರ್ ಆಗಿರುವ ಯದುಪ್ರಿಯಮ್ ಮೆಹ್ತಾ ಅವರ ಹೊಸ ಶೂ ನೋಡಿದ ತಂದೆ ಆರಂಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಶೂ ಬಾಕ್ಸ್ ತೆಗೆದ ಮೆಹ್ತಾ ತಂದೆ ಖುಷಿಯಿಂದ ಅದನ್ನು ತೆಗೆಯುತ್ತಾರೆ. ಶೂ ಡಿಸೈನ್ ಅವರಿಗೆ ಇಷ್ಟವಾಗುತ್ತದೆ. ನಂತರ ಬೆಲೆ ಕೇಳುತ್ತಾರೆ. ಬೆಲೆ ಕೇಳ್ತಿದ್ದತೆ ಅವರ ಮುಖದ ರಿಯಾಕ್ಷನ್ ಬದಲಾಗುತ್ತದೆ. ಒಂದು ಜೋಡಿ ಶೂ ಬೆಲೆ 4 ಲಕ್ಷ ರೂಪಾಯಿ ಎನ್ನುತ್ತಿದ್ದಂತೆ. ಶೂ ಕೆಳಗಿಟ್ಟು, ಮಗನಿಗೆ ಕೈ ಮುಗಿಯುತ್ತಾರೆ. ಈಗ ತಂದೆ-ಮಗನ ಈ ವಿಡಿಯೋ ನಗೆಗಡಲಲ್ಲಿ ತೇಲಿಸಿದೆ.
ತಂದೆ- ಮಗನ ಹಾಸ್ಯವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. 500 ರೂಪಾಯಿಗೆ ಶೂ ಸಿಗ್ತಿತ್ತು ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ಇಷ್ಟೋಂದು ದುಬಾರಿ ಬೆಲೆಯ ಶೂ? ಎಂದು ಈ ವಿಡಿಯೋಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.