ಟೀಮ್ ಇಂಡಿಯಾ ಆಟಗಾರನ ಕುದುರೆ ಪ್ರೀತಿ

jadeja_web-1
Published on

ಬೆಂಗಳೂರು: ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಕುದುರೆ ಪ್ರೀತಿ ಎಲ್ಲರಿಗೂ ಗೊತ್ತಿರುವುದೇ. ಫಾರ್ಮ್ ಕಟ್ಟಿಕೊಂಡಿರುವ ಜಡೇಜಾಗೆ ಬಿಡುವಿನ ವೇಳೆ ಕದುರೆಗಳದ್ದೇ ಪ್ರಪಂಚ. ಅವುಗಳ ಆರೈಕೆ, ಆಹಾರ ಪೂರೈಕೆ ಸೇರಿದಂತೆ ಇನ್ನಿತರ ಸೇವೆಯನ್ನು ಸ್ವತಃ ಜಡೇಜಾ ಅವರೇ ಮಾಡುತ್ತಾರೆ. ಲಾಕ್‌ಡೌನ್ ವೇಳೆ ಬಹುತೇಕ ತಮ್ಮ ಸಮಯವನ್ನು ಫಾರ್ಮ್ ಹೌಸ್‌ನಲ್ಲೇ ಕಳೆಯುತ್ತಿರುವ ಜಡೇಜಾ ನೆಚ್ಚಿನ ಕುದುರೆಗಳೊಂದಿಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.....

ಕರೊನಾ ವೈರಸ್ ಭೀತಿಯಿಂದ ಸಂಪೂರ್ಣ ಕ್ರೀಡಾ ಚಟುವಟಿಕೆ ಸ್ತಬ್ಧಗೊಂಡಿದ್ದರೆ, ಕ್ರೀಡಾಪಟುಗಳು ಒಂದಿಲ್ಲೊಂದು ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಅದರಲ್ಲೂ ರವೀಂದ್ರ ಜಡೇಜಾ ಮಾತ್ರ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ಕುದುರೆ ಮೇಲೆ ಸವಾರಿ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ. ಮನೆಯಲ್ಲೇ ಫಿಟ್ನೆಸ್ ಮಾಡುವ ಮೂಲಕ ಕ್ರಿಕೆಟ್ ಪುನರಾರಂಭದ ನಿರೀಕ್ಷೆಯಲ್ಲಿದ್ದಾರೆ.

ಜಡ್ಡು ಬೆಸ್ಟ್ ಫೀಲ್ಡರ್ ಎಂದ ರೋಡ್ಸ್

ಸದ್ಯದಲ್ಲಿ ರವೀಂದ್ರ ಜಡೇಜಾ ವಿಶ್ವದ ಬೆಸ್ಟ್ ಫೀಲ್ಡರ್‌ಗಳಲ್ಲಿ ಒಬ್ಬರು ಎಂದು ದಕ್ಷಿಣ ಅಫ್ರಿಕಾದ ಸ್ಟಾರ್ ಫಿಲ್ಡರ್ ಜಾಂಟಿ ರೋಡ್ಸ್ ಇತ್ತೀಚೆಗಷ್ಟೇ ಹೇಳಿದ್ದರು. ಸಾಕಷ್ಟು ಬದ್ಧತೆ ಹಾಗೂ ನಿರೀಕ್ಷೆ ಹೊಂದಿರುವ ಆಟಗಾರ ರೋಡ್ಸ್, ಅವರು ಸಾಕಷ್ಟು ಉತ್ತಮ ಕ್ಯಾಚ್‌ಗಳನ್ನು ಪಡೆದಿದ್ದಾರೆ. ಜತೆಗೆ ಬೌಲಿಂಗ್‌ನಲ್ಲೂ ಮಿಂಚುತ್ತಿದ್ದಾರೆ ಎಂದು ಸುರೇಶ್ ರೈನಾ ಜತೆಗೆ ನಡೆಸಿದ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ರೋಡ್ಸ್ ಹೇಳಿಕೊಂಡಿದ್ದಾರೆ. ಜಡೇಜಾ ಅವರನ್ನು ಆಸ್ಟ್ರೇಲಿಯಾದ ಮೈಕಲ್ ಬೆವೆನ್‌ಗೆ ಹೋಲಿಕೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net