More

    ನಿಂದನೆಗಳಿಗೆ ಬೇಸತ್ತು ಜಪಾನ್ ಕುಸ್ತಿತಾರೆ ಆತ್ಮಹತ್ಯೆ

    ಟೋಕಿಯೊ: ರಿಯಾಲಿಟಿ ಶೋಗಳಿಂದ ಜನಪ್ರಿಯತೆ ಪಡೆದಿದ್ದ ಜಪಾನ್‌ನ ವೃತ್ತಿಪರ ಮಹಿಳಾ ಕುಸ್ತಿ ತಾರೆ ಹನಾ ಕಿಮುರಾ, 22ನೇ ವಯಸ್ಸಿನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದರು. ಇದೇ ವೇಳೆ ಅಭಿಮಾನಿಗಳಿಂದ ಅಪಾರ ನಿಂದನೆ, ಟೀಕೆ, ಬೆದರಿಕೆಗಳನ್ನೂ ಎದುರಿಸಿದ್ದರು. ಇದರಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಕ್ರೀಡಾತಾರೆಯರ ಈದ್ ಸಂಭ್ರಮ ಹೇಗಿದೆ ಗೊತ್ತಾ?

    ಅಂತಾರಾಷ್ಟ್ರೀಯ ಜನಪ್ರಿಯತೆಯ ನೆಟ್‌ಫ್ಲಿಕ್ಸ್ ರಿಯಾಲಿಟಿ ಶೋ ‘ಟೆರೆಸ್ ಹೌಸ್’ ನಲ್ಲಿ ಹನಾ ಕಿಮುರಾ ಭಾಗವಹಿಸಿದ್ದರು. ‘ಬಿಗ್ ಬಾಸ್’ ಮಾದರಿಯ ಈ ಶೋನಲ್ಲಿ ತಲಾ ಮೂವರು ಪುರುಷರು ಮತ್ತು ಮಹಿಳೆಯರು ಟೋಕಿಯೊದ ಮನೆಯೊಂದರಲ್ಲಿ ವಾಸಿಸಬೇಕಾಗಿತ್ತು. ಕರೊನಾ ಹಾವಳಿ ಶುರುವಾದ ಬಳಿಕ ಈ ಶೋ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈ ಕಾರ್ಯಕ್ರಮದಿಂದಾಗಿ ಕಿಮುರಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಿಂದನೆಗಳಿಗೆ ಒಳಗಾಗಿದ್ದರು.

    ಇದನ್ನೂ ಓದಿ: ಸಚಿನ್-ಅಂಜಲಿ ದಂಪತಿಯ ಸುವರ್ಣ ನೆನಪಿಗೆ ಬೆಳ್ಳಿ ಸಂಭ್ರಮ

    ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಕೊನೆಯದಾಗಿ ಪೋಸ್ಟ್ ಮಾಡಿದ್ದ ಕಿಮುರಾ, ಬೆಕ್ಕಿನ ಜತೆಗಿನ ಚಿತ್ರದೊಂದಿಗೆ ‘ಗುಡ್‌ಬೈ’ ಎಂದು ಟ್ವೀಟಿಸಿದ್ದರು. ಮತ್ತೊಂದು ಸಂದೇಶದಲ್ಲಿ ‘ಐಯಾಮ್ ಸಾರಿ’ ಎಂದೂ ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಅವರ ಸಾವಿನ ಸುದ್ದಿ ಹೊರಬಿದ್ದಿತ್ತು. ಆರಂಭದಲ್ಲಿ ಸಾವಿಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದರೆ ಪೊಲೀಸ್ ತನಿಖೆಯಿಂದ ಸೋಮವಾರ ತಿಳಿದುಬಂದಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಿಮುರಾ ಏಕಾಂಗಿಯಾಗಿ ವಾಸಿಸುತ್ತಿದ್ದ ಮನೆಯಲ್ಲಿ ವಿಷಾನಿಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‌ನಿಂದ ಕವರ್ ಮಾಡಿದ ರೀತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಕೆಲ ಆತ್ಮಹತ್ಯಾ ಪತ್ರಗಳೂ ಸ್ಥಳದಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.

    ನಿಂದನೆಗಳಿಗೆ ಬೇಸತ್ತು ಜಪಾನ್ ಕುಸ್ತಿತಾರೆ ಆತ್ಮಹತ್ಯೆ

    ಕಿಮುರಾ ಸಾವಿಗೆ ಜಪಾನ್ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪದ ಸಂದೇಶಗಳನ್ನೂ ಹರಿಬಿಡುತ್ತಿದ್ದಾರೆ. ‘ಮಾನಹಾನಿಕರ ಕಮೆಂಟ್‌ಗಳನ್ನು ಕಡೆಗಣಿಸುವಂತೆ ಸಾಕಷ್ಟು ಜನರು ಹೇಳುತ್ತಾರೆ. ಆದರೆ ಅದು ಕಠಿಣ. ಮನರಂಜನೆ ಕೊಡುವ ವ್ಯಕ್ತಿಗಳು ಕೂಡ ಮನುಷ್ಯರು. ಈ ಮಾತನ್ನು ಮರೆಯದಿರಿ’ ಎಂದು ಗಾಯಕಿ ಕೈರಿ ಪಮ್ಯು ಪಮ್ಯು ಬರೆದಿದ್ದಾರೆ. ಕಿಮುರಾ ತಾಯಿ ಕ್ಯೂಕೋ ಕೂಡ ಜಪಾನ್‌ನಲ್ಲಿ ಜನಪ್ರಿಯ ವೃತ್ತಿಪರ ಕುಸ್ತಿಪಟುವಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts