More

    ಸಚಿನ್-ಅಂಜಲಿ ದಂಪತಿಯ ಸುವರ್ಣ ನೆನಪಿಗೆ ಬೆಳ್ಳಿ ಸಂಭ್ರಮ

    ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟಿಂಗ್ ಸಾಮ್ರಾಟನಾಗಿ ಮೆರೆದ ದಿಗ್ಗಜ. ಆತನ ಹೆಸರಿನಲ್ಲಿ ಸಾಲು ಸಾಲು ವಿಶ್ವ ದಾಖಲೆಗಳಿವೆ. ಪ್ರತಿದಿನವನ್ನು ಮೆಲುಕು ಹಾಕಿದರೆ ಆತನ ಹೆಸರಿನಲ್ಲಿ ವೃತ್ತಿಜೀವನದ ಒಂದಿಲ್ಲೊಂದು ವಿಶೇಷ ದಿನ ಸಿಗುತ್ತದೆ. ಆದರೆ, ಅವುಗಳನ್ನು ನೆನಪಿಸಿಕೊಳ್ಳಲು ಮರೆತರೂ ಮೇ 24ರ ದಿನಾಂಕವನ್ನು ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ, ಆ ದಿನ ಲಿಟಲ್ ಮಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್ ಹಾಗೂ ಡಾ.ಅಂಜಲಿ ಜೋಡಿ ಹಸೆಮಣೆಗೇರಿದ ದಿನ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿರುವ ಸಚಿನ್, ದಾಂಪತ್ಯದಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದಾರೆ.

    ಇದನ್ನೂ ಓದಿ:ಕ್ರೀಡಾತಾರೆಯರ ಈದ್ ಸಂಭ್ರಮ ಹೇಗಿದೆ ಗೊತ್ತಾ? 

    ಏರ್‌ಪೋರ್ಟ್‌ನಲ್ಲೇ ಲವ್ ಅಟ್ ಸ್ಟ್ ಸೈಟ್!
    ಸಚಿನ್-ಅಂಜಲಿ ದಂಪತಿಯ ಸುವರ್ಣ ನೆನಪಿಗೆ ಬೆಳ್ಳಿ ಸಂಭ್ರಮಲವ್ ಅಟ್ ಸ್ಟ್ ಸೈಟ್ ಎಂದು ಹೇಳುವುದು ಸಚಿನ್ ದಂಪತಿಗೆ ಹೇಳಿ ಮಾಡಿದಂತಿದೆ. 1990ರಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವಾಸ ಮುಗಿಸಿ ಮುಂಬೈಗೆ ವಾಪಸಾದ ಸಚಿನ್, ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ ಅಂಜಲಿ ಅವರನ್ನು ನೋಡಿ ಕ್ಲೀನ್‌ಬೌಲ್ಡ್ ಆಗಿದ್ದರು. ಈ ವೇಳೆ ತಾಯಿಯನ್ನು ಕರೆದೊಯ್ಯಲು ಅಂಜಲಿ ಅಲ್ಲಿಗೆ ಆಗಮಿಸಿದ್ದರು. ಬಳಿಕ ಈ ಸ್ನೇಹ, ಪ್ರೀತಿಗೆ ತಿರುಗಿತು. ನಂತರ ನಡೆದಿದೆಲ್ಲಾ ಇತಿಹಾಸ. ತಮಗಿಂತ 6 ವರ್ಷ ದೊಡ್ಡವರಾದ ಅಂಜಲಿಯನ್ನು ಸಚಿನ್ ಮೇ 24, 1995 ರಂದು ಮುಂಬೈನಲ್ಲಿ ಮದುವೆಯಾದರು. ಸಂಪೂರ್ಣ ಖಾಸಗಿಯಾಗಿ ನಡೆದಿದ್ದ ಮದುವೆ ಸಮಾರಂಭಕ್ಕೆ ಕೇವಲ ಕುಟುಂಬ ಸದಸ್ಯರು ಹಾಗೂ ಆತ್ಮೀಯ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿತ್ತು.

    ಕುಟುಂಬಕ್ಕಾಗಿ ವೃತ್ತಿ ತ್ಯಜಿಸಿದ್ದ ಅಂಜಲಿ
    ಮುಂಬೈ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಯಲ್ಲಿ ಸ್ವರ್ಣ ಪದಕ ಗಿಟ್ಟಿಸಿಕೊಂಡಿರುವ ಅಂಜಲಿ, ಸಚಿನ್ ಹಾಗೂ ಕುಟುಂಬ ನಿರ್ವಹಣೆಗಾಗಿ ತಮ್ಮ ವೃತ್ತಿಯನ್ನೇ ತ್ಯಜಿಸಿದ್ದಾರೆ. ಈ ದಂಪತಿಗೆ ಪುತ್ರಿ ಸಾರಾ ಹಾಗೂ ಮಗ ಅರ್ಜುನ್ ಎಂಬ ಇಬ್ಬರು ಮಕ್ಕಳಿದ್ದಾರೆ. 19 ವರ್ಷದ ಅರ್ಜುನ್ ಈಗಾಗಲೇ ತಂದೆಯಂತೆಯೇ ಕ್ರಿಕೆಟ್ ಆಯ್ಕೆ ಮಾಡಿಕೊಂಡಿದ್ದರೆ, ಮಗಳು ತಾಯಿಯಂತೆ ವೈದ್ಯಕೀಯ ಪದವಿ ಅಭ್ಯಾಸಿಸುತ್ತಿದ್ದಾರೆ. ಆದರೆ, ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಲಾಕ್‌ಡೌನ್ ಬಿಸಿ ಎದುರಾಗಿದೆ.

    ಸಚಿನ್-ಅಂಜಲಿ ದಂಪತಿಯ ಸುವರ್ಣ ನೆನಪಿಗೆ ಬೆಳ್ಳಿ ಸಂಭ್ರಮ

    ಇದನ್ನೂ ಓದಿ: ಪತ್ನಿಗೆ ಹೊಡೆದು ಸಂಕಷ್ಟಕ್ಕೆ ಸಿಲುಕಿದ ಟೆನಿಸ್ ಆಟಗಾರ

    1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್, ಬಳಿಕ 24 ವರ್ಷಗಳ ಕಾಲ ರಾಷ್ಟ್ರೀಯ ತಂಡದ ಅವಿಭಾಜ್ಯ ಅಂಗವಾಗಿ ಮೆರೆದರು. 200 ಟೆಸ್ಟ್ ಪಂದ್ಯಗಳನ್ನಾಡಿದ ಸಚಿನ್ 51 ಶತಕ, 68 ಅರ್ಧಶತಕ ಸೇರಿದಂತೆ 15921 ರನ್ ಗಳಿಸಿದರೆ, 463 ಏಕದಿನ ಪಂದ್ಯಗಳಿಂದ 49 ಶತಕ, 96 ಅರ್ಧಶತಕ ಒಳಗೊಂಡಂತೆ 18,426 ರನ್ ಸಿಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts