ಹತ್ಯೆಯಾಗಿ 10 ದಿನಗಳಾದರೂ ಈವರೆಗೆ ಪತ್ತೆಯಾಗಿಲ್ಲ ರೇಣುಕಸ್ವಾಮಿ ಮೊಬೈಲ್​; ಪೊಲೀಸರಿಗೆ ತಲೆನೋವಾದ ಪ್ರಮುಖ ಸಾಕ್ಷಿ

1 Min Read
Darshan

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಸೇರಿದಂತೆ 19ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಪ್ರಕರಣದ ಆಳ ಕೆದಕಿದಷ್ಟು ಹೊಸ ವಿಚಾರಗಳು ಹೊರಬರುತ್ತಿವೆ. ಘಟನೆಗೆ ಸಂಬಂಧಿಸಿದಂತೆ ಹತ್ಯೆಯಾದ ರೇಣುಕಸ್ವಾಮಿ ಮೊಬೈಲ್​ ಪತ್ತೆಯಾಗದಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರೇಣುಕಸ್ವಾಮಿ ಹತ್ಯೆ ನಡೆದು 10 ದಿನಗಳಾಗುತ್ತ ಬಂದರೂ ಈವರೆಗೂ ಸಂತ್ರಸ್ತನ ಫೋನ್​ ಪತ್ತೆಯಾಗಿಲ್ಲ. ಜೂನ್​ 08ರಂದು ಪಟ್ಟಣಗೆರೆ ಶೆಡ್​ನಲ್ಲಿ ಚಿತ್ರದುರ್ಗ ಮೂಲಕ ರೇಣುಕಸ್ವಾಮಿಯನ್ನು ಹತ್ಯೆ ಮಾಡಲಾಗಿತ್ತು. ಜೂನ್​ 08ರಂದು ಆರೋಪಿಗಳು ರೇಣುಕಸ್ವಾಮಿರನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆ ತರುವ ವೇಳೆ ಮೊಬೈಲ್​ ಸ್ವಿಚ್​ ಆಫ್​ ಮಾಡಲಾಗಿತ್ತು. ಬಳಿಕ ಪಟ್ಟಣಗೆರೆ ಶೆಡ್​ನಲ್ಲಿ ಮೊಬೈಲ್​ ಆನ್​ ಮಾಡಲಾಗಿತ್ತು. ಬಳಿಕ ಆಫ್​ ಮಾಡಲಾಗಿದೆ.

ಇದನ್ನೂ ಓದಿ: ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ; ಐದು ಮಂದಿ ಮೃತ್ಯು, ಹಲವರು ಗಂಭೀರ

ಹತ್ಯೆಯ ಬಳಿಕ ಸಂತ್ರಸ್ತನ ಮೃತದೇಹವನ್ನು ಸುಮನಹಳ್ಳಿ ಬಳಿ ಇರುವ ರಾಜಕಾಲುವೆಗೆ ಎಸೆಯಲಾಗಿತ್ತು. ಮೃತದೇಹ ಸಿಕ್ಕ ಬಳಿಕ ತನಿಖೆ ಆರಂಭಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಬಂಧಿತ ಆರೋಪಿಗಳು ರೇಣುಕಸ್ವಾಮಿ ಮೊಬೈಲ್​ಅನ್ನು ರಾಜಕಾಲುವೆಗೆ ಎಸೆದಿದ್ಧಾಗಿ ವಿಚಾರಣೆ ವೇಳೆ ಹೇಳಿದ್ದು, ಅದನ್ನು ಹುಡುಕುತ್ತಾ ಹೊರಟ ಪೊಲೀಸರಿಗೆ ಈವರೆಗೆ ರೇಣುಕಸ್ವಾಮಿ ಮೊಬೈಲ್​ ಪತ್ತೆಯಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಸ್ವಾಮಿ ಮೊಬೈಲ್​ ಪ್ರಮುಖ ಸಾಕ್ಷ್ಯಾಧಾರವಾಗಿದ್ದು, ಕಮೆಂಟ್​ ಹಾಗೂ ಮೆಸ್ಸೇಜ್​ ಸಂಬಂಧ ಆತನ ಮೊಬೈಲ್​ನಲ್ಲೇ ಕ್ಷಮೆ ಕೋರುತ್ತಿರುವ ವಿಡಿಯೋ ಒಂದನ್ನು ಮಾಡಿಸಿದ್ದರು ಎಂದು ತಿಳಿದು ಬಂದಿದೆ. ಘಟನೆ ನಡೆದು 10 ದಿನಗಳಾಗುತ್ತ ಬಂದರೂ ಈವರೆಗೆ ಮೊಬೈಲ್​ ಪತ್ತೆಯಾಗದಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

See also  ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸಿ
Share This Article