

ಬೆಂಗಳೂರು: ಇತ್ತೀಚೆಗಷ್ಟೇ ನಡೆದ ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ, ಡಾ. ವಿ. ರವಿಚಂದ್ರನ್, ಕಾರ್ಯಕ್ರಮವನ್ನು ಉದ್ದೇಶಿಸಿ ಜನರೊಂದಿಗೆ ಮಾತನಾಡುತ್ತಿದ್ದ ವೇಳೆ ಕೆಲವು ಘಟನೆಗಳನ್ನು ನೆನಪಿಸಿಕೊಂಡು ಶೀಘ್ರವೇ 'ಪ್ರೇಮಲೋಕ' ಸಿನಿಮಾವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
"ಒಂದು ವರ್ಷ ಸುಮ್ಮನೆ ಕುಳಿತಿದ್ದೀನಿ ನಾನು! ಎಲ್ಲರೂ ನಾನು ಏನೂ ಮಾಡದೆ ಹಾಗೇ ಇದ್ದೀನಿ ಅಂದುಕೊಂಡಿದ್ದರು. ಸುಮ್ಮನೆ ಕುಳಿತಿಲ್ಲ ರೀ, ಮತ್ತೇ ಪ್ರೇಮಲೋಕ ಕಟ್ಟಿಕೊಡುತ್ತೀನಿ ನಿಮಗೆ, ಮತ್ತೊಮ್ಮೆ ಮನೆ ಮನೆಗಳಲ್ಲಿ ಈ ಚಿತ್ರದ ಹಾಡಗಳನ್ನು ಮೆಲುಕು ಹಾಕಬೇಕು ನೀವು, ಹಾಗೆ ಮಾಡ್ತೀನಿ" ಎಂದರು.
"ನಾನು ಪ್ರೇಮಲೋಕ ಮಾಡಬೇಕಾದರೆ, ಚೆನ್ನೈನಲ್ಲಿ ರೆಕಾರ್ಡಿಂಗ್ ನಮ್ಮದು. ಇಡೀ ಚೆನ್ನೈನಲ್ಲಿದ್ದ ಅಷ್ಟು ಜನ ಆರ್ಕೆಸ್ಟ್ರಾ ಭಾರಿಸುವವರು, ವೈಲಿನ್ ನುಡಿಸುವವರಿಂದ ಹಿಡಿದು ಎಲ್ಲರೂ ನಮ್ಮ ಸ್ಟುಡಿಯೋದಲ್ಲಿ ಇದ್ದರು. 150 ಜನ ಭಾರಿಸಿದ್ದ ಸಂಗೀತವನ್ನು ಇವತ್ತೂ ಕೂಡ ನೀವು ಮೆಲುಕು ಹಾಕುತ್ತಿದ್ದೀರಾ. ನಿಮಗೆಲ್ಲಾ ಗನ್ ಬೇಕು ಇವತ್ತು, ಆದ್ರೆ ನಾನು ರಾಗದಲ್ಲಿ ಹೊಡೆದುಕೊಂಡು ಬಂದವನು. ಎಂದೂ ಶೂಟ್ ಮಾಡಿಕೊಂಡು ಬರಲಿಲ್ಲ. ಮನಸುಗಳಿಗೆ ಮಾತ್ರ ಗುರಿಯಿಟ್ಟವನು ನಾನು" ಎಂದರು.
"ಮತ್ತೇ ನಾನು 150 ವೈಲಿನ್ ಸಮೇತವೇ ಸಿನಿಮಾ ಮಾಡಿಕೊಂಡು ಬರುತ್ತೇನೆ ಹೊರೆತು, ಗನ್ ಹಿಡಿದು ಬರುವುದಿಲ್ಲ. ಪ್ರೀತಿ ಒಂದೇ. ನಮ್ಮ ಕಾರು ಚಾಲಕರು ಅಣ್ಣ ನಿಮ್ಮ ಹಾಡಿಲ್ಲ ಎಂದರೆ ಗಾಡಿನೇ ಸ್ಟಾರ್ಟ್ ಆಗಲ್ಲ ಅಂತಾರೆ. ಅರೇ, ನನದೊಂದೇ ರೀ ಹಾಡಿರೋದು. ಹುಟ್ಟಿದಾಗಿನಿಂದ ಮಿಡ್ನೈಟ್ ಮಸಾಲಾವರೆಗೂ ಇರುವುದು ನನ್ನ ಹಾಡು ಮಾತ್ರ" ಎಂದು ಹೇಳಿದರು,(ಏಜೆನ್ಸೀಸ್).