ಅತಿಥೇಯರಿಗೆ ಗುಡ್​ ನ್ಯೂಸ್; ತಂಡಕ್ಕೆ ವಾಪಸ್ಸಾದ ಆರ್. ಅಶ್ವಿನ್​

R Ashwin
Published on

ರಾಜ್​ಕೋಟ್​: ವೈಯಕ್ತಿಕ ಕಾರಣದಿಂದ ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಿಂದ ಹೊರನಡೆದಿದ್ದ ಆರ್​. ಅಶ್ವಿನ್​ ತಂಡವನ್ನು ವಾಪಸ್​ ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಬಿಸಿಸಿಐ ಪ್ರಕಟಣೆಯನ್ನು ಹೊರಡಿಸಿದ್ದು, ನಾಲ್ಕನೇ ದಿನ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿಸಿದೆ. ಪಂದ್ಯದ ಎರಡನೇ ದಿನದ ಬಳಿಕ ತಾಯಿಯ ಅನಾರೋಗ್ಯದಿಂದಾಗಿ ಅಶ್ವಿನ್ ಅವರು ಚೆನ್ನೈಗೆ ಮರಳಿದ್ದರು.

ತುರ್ತುಪರಿಸ್ಥಿತಿಯ ಕಾರಣದಿಂದಾಗಿ ಅಶ್ವಿನ್ ಅವರು 3ನೇ ಟೆಸ್ಟ್‌ನ 2ದಿನದ ಬಳಿಕ ತಾತ್ಕಾಲಿಕವಾಗಿ ಹಿಂದೆ ಸರಿಯಬೇಕಾಯಿತು. ಈಗ ಮತ್ತೆ ಅವರು ತಂಡವನ್ನು ಸೇರಿಕೊಳ್ಳುವುದರ ಬಗ್ಗೆ ಘೋಷಿಸಲು ಸಂತೋಷವಾಗುತ್ತಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net