More

    ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ 10 ರೂ. ಮದುವೆಯಾದರೂ ಈ ನಟಿ ಸ್ಟಿಲ್​ ಸಿಂಗಲ್

    ಮುಂಬೈ: ಕೆಲವು ನಟಿಯರುಯಾವುದೇ ಹಿನ್ನಲೆ ಇಲ್ಲದೇ ಚಿತ್ರರಂಗ ಪ್ರವೇಶಿಸಿ ತಮ್ಮ ನಟನ ಕೌಶಲ್ಯದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರುತ್ತಾರೆ. ಅವರು ಎಷ್ಟು ಬೇಗ ಖ್ಯಾತಿ ಪಡೆಯುತ್ತಾರೆ ಅಷ್ಟೇ ಕುಖ್ಯಾತಿಗೆ ಒಳಗಾಗುತ್ತಾರೆ. ಇದೀಗ ನಾವು ಮಾತನಾಡಲು ಹೊರಟಿರುವ ನಟಿ ಕೂಡ ಇದೇ ಸಾಲಿಗೆ ಸೇರಿದ್ದು, ಇತ್ತೀಚಿನ ದಿನಗಳಲ್ಲಿ ಇವರ ಹೆಸರು ವ್ಯಾಪಕವಾಗಿ ಕೇಳಿ ಬರುತ್ತಿದೆ.

    ಸೌತ್​ ಸಿನಿ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ನಟಿ ಬಾಲಿವುಡ್​ನಲ್ಲೂ ಯಶ ಕಂಡಿದ್ದಾರೆ. ಚಿತ್ರರಂಗದಲ್ಲಿ ಪಡೆದ ಯಶಸ್ಸನ್ನು ಮುಂದಿಟ್ಟುಕೊಂಡು ರಾಜಕೀಯ ಪ್ರವೇಶ ಪಡೆದ ನಟಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಪ್ರೀತಿಸಿ ಮದುವೆಯಾದರು, ಈಗಲೂ ಕೂಡ ಸಿಂಗಲ್​ ಆಗಿ ಜೀವನ ನಡೆಸುತ್ತಿದ್ದಾರೆ.

    ನಾವು ಈಗ ಮಾತಣಾಡಲು ಹೊರಟಿರುವ ನಟಿ ಚಿತ್ರರಂಗಕ್ಕೆ ಕಾಲಿಟ್ಟಾಗ ಮತ್ತು ಪ್ರೇಕ್ಷಕರ ಹೃದಯವನ್ನು ಗೆಲುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ನಟಿ ತನ್ನ ವೃತ್ತಿಪರ ಜೀವನದಲ್ಲಿ ಅನುಭವಿಸಿದ ಸಂತೋಷ ಮತ್ತು ವಿಜಯವನ್ನು ಅವರ ವೈಯಕ್ತಿಕ ಜೀವನದಲ್ಲಿ ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ ಈ ನಟಿ ಹೆಸರು ಲಲಿತಾ ರಾಣಿ ರಾವ್ ಅಲಿಯಾಸ್​ ಜಯಪ್ರದಾ. ಇವರ ತಂದೆ ಕೃಷ್ಣ ರಾವ್ ಟಾಲಿವುಡ್​ನಲ್ಲಿ ನಿರ್ಮಾಪಕರಾಗಿದ್ದರು.

    jayapradha

    ಇದನ್ನೂ ಓದಿ: ಬ್ಯಾಕ್​ ಟು ಬ್ಯಾಕ್​ ಶತಕ; ವಿರಾಟ್​ ಕೊಹ್ಲಿ ದಾಖಲೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್

    ಜಯಪ್ರದಾ ಅವರು 13 ನೇ ವಯಸ್ಸಿನಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಅವರ ಮೊದಲ ಚಿತ್ರಕ್ಕೆ 10 ರೂ. ಸಂಭಾವನೆ ಪಡೆದರು ಆ ನಂತರ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾದ ನಟಿ ತಡನಂತರ ಬಾಲಿವುಡ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಮಣಿಯರ ಪೈಕಿ ಒಬ್ಬರಾಗಿದ್ದರು. ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಜಯಪ್ರದಾ ಅವರು ಅಮಿತಾಭ್ ಬಚ್ಚನ್, ಧರ್ಮೇಂದ್ರ, ರಾಕೇಶ್ ರೋಷನ್, ರಿಷಿ ಕಪೂರ್ ಮತ್ತು ಜಿತೇಂದ್ರರಂತಹಟಾಪ್ ನಟರೊಂದಿಗೆ ನಟಿಸಿದ್ದಾರೆ.

    ಚಿತ್ರರಂಗದಲ್ಲಿ ಯಶಸ್ವಿಯಾದರೂ ಸಹ ನಟಿ ಜಯಪ್ರದಾ ತಮ್ಮ ವೈಯಕ್ತಿಕ ಜೀವನದಲ್ಲಿ ಆದ ಕೆಲವು ಘಟನೆಗಳಿಂದ ವಿವಾದಕ್ಕೀಡಾಗಿದ್ದರು. 1986 ರಲ್ಲಿ, ಶ್ರೀಕಾಂತ್​ ನಹಾತ ಎಂಬುವವರನ್ನು ಪ್ರೀತಿಸಿ ಮದುವೆಯಾದರು. ಈಗಾಗಲೇ ಮದುವೆಯಾಗಿ ಇಬ್ಬರ ಮಕ್ಕಳ ತಂದೆಯಾಗಿದ್ದ ನಹಾತ ಅವರೊಂದಿಗಿನ ವಿವಾಹವು ಜಯಪ್ರದಾ ಅವರನ್ನು ಹೆಚ್ಚು ಕುಖ್ಯಾತಿಗೆ ಒಳಪಡಿಸಿತ್ತು ಮತ್ತು ಇದು ಮುಂದಿನ ದಿನಗಳಲ್ಲಿ ದೊಡ್ಡ ವಿವಾದ ಕೂಡ ಆಯಿತು.

    ಜಯಪ್ರದಾ ಪರಿ ಶ್ರೀಕಾಂತ್​ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ನಿರಾಕರಿಸಿದರು ಇದು ಇಬ್ಬರ ಮಡುವಿನ ವೈಮನಸ್ಸಿಗೆ ಕಾರಣವಾಯಿತು. ಅಂತಿಮವಾಗಿ ಇಬ್ಬರು ಕೂಡ ದೂರ ಉಳಿಯಲು ನಿರ್ಧರಿಸಿದರು. ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿರಬೇಕಾದರೆ ಚಿತ್ರರಂಗವನ್ನು ತೊರೆದ ನಟಿ 1994 ರಲ್ಲಿ ತೆಲುಗು ದೇಶಂ ಪಕ್ಷಕ್ಕೆ (TDP) ಸೇರಿದರು. 2004-2014ರವರೆಗೆ ಉತ್ತರ ಪ್ರದೇಶದ ರಾಂಪುರದಿಂದ ಸಂಸದರಾಗಿಯೂ ಸೇವೆ ಸಲ್ಲಿಸಿದ್ಧಾರೆ. ಪ್ರಸ್ತುತ ನಟಿಯ ಹೆಸರು ಪ್ರಕರಣ ಒಂದರಲ್ಲಿ ಕೇಳಿ ಬರುತ್ತಿದ್ದು, ನ್ಯಾಯಾಲಯ ಈಕೆಯನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts