More

  ದೇಶದ ಟಾಪ್​ 5 ಜನಪ್ರಿಯ ಸಿಎಂ ಪೈಕಿ ಯೋಗಿ​ಗೆ ಎರಡನೇ ಸ್ಥಾನ; ಮೊದಲನೆಯವರು ಯಾರು?

  ನವದೆಹಲಿ: ನಾಯಕರ ಸ್ವೀಕಾರಾರ್ಹತೆಯನ್ನು ಅಳೆಯುವ ಉದ್ದೇಶದಿಂದ ಖಾಸಗಿ ಮಾಧ್ಯಮವೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಈ ಪಟ್ಟಿಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

  ಈ ಸಮೀಕ್ಷೆಯು ದೇಶದ ಮುಖ್ಯಮಂತ್ರಿಗಳ ಜನಪ್ರಿಯತೆಯನ್ನು ಅಳೆಯುವ ಗುರಿಯನ್ನು ಹೊಂದಿದ್ದು, ಕೆಲವು ಕುತೂಹಲಕಾರಿ ಅಂಶಗಳನ್ನು ಅನಾವರಣಗೊಳಿಸಿದೆ.

  ಇದನ್ನೂ ಓದಿ: ನಾಯಕತ್ವ ಬಿಕ್ಕಟ್ಟು; ಕಾಂಗ್ರೆಸ್​ ‘ಗುಡ್​ ಬೈ’ ಹೇಳಲಿದ್ದಾರಾ ಮಾಜಿ ಸಿಎಂ ಕಮಲ್​ನಾಥ್​

  ಶೇ. 52.7 ರೇಟಿಂಗ್‌ನೊಂದಿಗೆ ಒಡಿಶಾದ ಸಿಎಂ ನವೀನ್ ಪಟ್ನಾಯಕ್ ಮೊದಲ ಸ್ಥಾನದಲ್ಲಿದ್ದರೆ. ಶೇ. 51.3 ರೇಟಿಂಗ್‌ನೊಂದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಎರಡನೇ ಸ್ಥಾನದಲ್ಲಿದ್ದಾರೆ. ಶೇ. 48.6 ರೇಟಿಂಗ್​ನೊಂದಿಗೆ ಮೂರನೇ ಸ್ಥಾನದಲ್ಲಿ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಶೇ. 42.6 ರೇಟಿಂಗ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿ ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಶೇ. 41.4 ರೇಟಿಂಗ್​ನೊಂದಿಗೆ ತ್ರಿಪುರಾ ಸಿಎಂ ಡಾ. ಮಾಣಿಕ್ ಸಹಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

  ತ್ರಿಪುರಾ ಸಿಎಂ ಡಾ. ಮಾಣಿಕ್ ಸಹಾ ತಮ್ಮ ಸರಳತೆ ಹಾಗೂ ಪ್ರಾಮಾಣಿಕತೆಯಿಂದ ಹೆಚ್ಚು ಖ್ಯಾತಿ ಪಡೆದಿದ್ದು, ಜನರು ಅವರ ನಾಯಕತ್ವದ ಗುಣಗಳನ್ನು ಹಾಡಿಹೊಗಳಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಅವರು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ಜನರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts