More

    ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್​ ನಿಧನ

    ನವದೆಹಲಿ: ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಸಲ್ಲೇಖನ ವ್ರತ ಘೋಷಿಸಿ ದೇಹ ತ್ಯಾಗ ಮಾಡಿದ್ದಾರೆ. ಛತ್ತೀಸ್‌ಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

    ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಆಚಾರ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಆಹಾರ ಹಾಗೂ ನೀರನ್ನು ತ್ಯಜಿಸಿದ್ದರು ಎಂದು ತಿಳಿದು ಬಂದಿದೆ.

    ಆಚಾರ್ಯರು ಕೊನೆಯ ಉಸಿರಿನವರೆಗೂ ಜಾಗೃತ ಸ್ಥಿತಿಯಲ್ಲಿದ್ದು ಮಂತ್ರಗಳನ್ನು ಪಠಿಸುತ್ತಲೇ ಇಹಲೋಕ ತ್ಯಜಿಸಿದ್ದಾರೆ. ಶ್ರೀಗಳ ಅಂತ್ಯಸಂಸ್ಕಾರವು ಫೆಬ್ರವರಿ 18ರ ಭಾನುವಾರದಂದು ಮಧ್ಯಾಹ್ನ 1 ಘಂಟೆಗೆ ಜೈನ ಧರ್ಮದ ವಿಧಿವಿಧಾನಗಳ ಪ್ರಕಾರ ನಡೆಯಲಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಟೆಸ್ಟ್​ ಕ್ರಿಕೆಟ್​ನಲ್ಲಿ ಡಬಲ್​ ಸೆಂಚುರಿ ಬಾರಿಸಿದ ರವೀಂದ್ರ ಜಡೇಜಾ

    ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ 10 ಅಕ್ಟೋಬರ್ 1946 ರಂದು ಜನಿಸಿದರು. ಅವರು 30 ಜೂನ್ 1968 ರಂದು ರಾಜಸ್ಥಾನದ ಅಜ್ಮೀರ್ ನಗರದಲ್ಲಿ ತಮ್ಮ ಗುರು ಆಚಾರ್ಯಶ್ರೀ ಜ್ಞಾನಸಾಗರ್ ಜಿ ಮಹಾರಾಜ್ ಅವರಿಂದ ಮುನಿದೀಕ್ಷೆಯನ್ನು ಪಡೆದರು. ಅವರ ಕಠಿಣ ತಪಸ್ಸನ್ನು ಕಂಡು ಆಚಾರ್ಯಶ್ರೀ ಜ್ಞಾನಸಾಗರ್ ಜಿ ಮಹಾರಾಜ್ ಅವರಿಗೆ ಆಚಾರ್ಯ ಹುದ್ದೆಯನ್ನು ನೀಡಿದ್ದರು.

    ಆಚಾರ್ಯ ಶ್ರೀಯವರು 1975ರ ಸುಮಾರಿಗೆ ಬುಂದೇಲಖಂಡಕ್ಕೆ ಬಂದರು. ಬುಂದೇಲ್‌ಖಂಡ್‌ನ ಜೈನ ಸಮುದಾಯದ ಭಕ್ತಿ ಮತ್ತು ಸಮರ್ಪಣೆಯಿಂದ ಅವರು ಪ್ರಭಾವಿತರಾಗಿದ್ದರು, ಅವರು ತಮ್ಮ ಹೆಚ್ಚಿನ ಸಮಯವನ್ನು ಬುಂದೇಲ್‌ಖಂಡದಲ್ಲಿ ಕಳೆದರು. ಆಚಾರ್ಯಶ್ರೀಗಳು ಸುಮಾರು 350 ದೀಕ್ಷೆಗಳನ್ನು ನೀಡಿದ್ದಾರೆ. ಅವರ ಶಿಷ್ಯರು ದೇಶಾದ್ಯಂತ ಸಂಚರಿಸಿ ಜೈನ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಮುನಿಗಳು ಹಿಂದಿ, ಮರಾಠಿ ಮತ್ತು ಕನ್ನಡದಲ್ಲಿ ಪರಿಣಿತರಾಗಿದ್ದರು, ಹಿಂದಿ ಹಾಗೂ ಸಂಸ್ಕೃತದಲ್ಲಿ ಸಾಕಷ್ಟು ಲೇಖನ ಬರೆದಿದ್ದಾರೆ. ಆಚಾರ್ಯರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts