ಗಂಭೀರ್​-ದ್ರಾವಿಡ್​ ಪೈಕಿ ಯಾರು ಬೆಸ್ಟ್​; ಯಾರು ಊಹಿಸದಿರುವ ಉತ್ತರ ನೀಡಿದ ಆರ್​. ಅಶ್ವಿನ್​

Ashwin Gauti Rahul

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಆತಿಥೇಯರು ಭರ್ಜರಿ ಜಯ ಸಾಧಿಸಿದ್ದು, ಪಾಕಿಸ್ತಾನದ ಎದುರು ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಪ್ರವಾಸಿ ಬಾಂಗ್ಲಾದೇಶಕ್ಕೆ ಮಣ್ಣು ಮುಕ್ಕಿಸುವಲ್ಲಿ ಯಶಸ್ವಿಯಾಗಿರುವ ಭಾರತ ತಂಡ ಇದೀಗ ಸೆಪ್ಟೆಂಬರ್​ 27ರಿಂದ ಆರಂಭವಾಗಲಿರುವ ಸರಣಿಯ ಎರಡನೇ ಪಂದ್ಯಕ್ಕೆ ತಯಾರಿ ಆರಂಭಿಸಿದೆ.

ಇನ್ನೂ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ನಂತರ ಹಲವು ವಿಚಾರಗಳ ಕುರಿತು ಮಾತನಾಡಿರುವ ಟೀಮ್​ ಇಂಡಿಯಾ ಆಲ್ರೌಂಡರ್​ ಆರ್​. ಅಶ್ವಿನ್​ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಟೀಮ್​ ಇಂಡಿಯಾದ ಮಾಜಿ ಹಾಗೂ ಹಾಕಿ ಕೋಚ್​ಗಳಿಬ್ಬರ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿರುವ ಅಶ್ವಿನ್​ ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: VIDEO| ಆಕೆ ಹಿಂದೂ, ದೊಡ್ಡವಳಾದ ಮೇಲೆ ಅವಳನ್ನು ಕೊಲ್ಲುವೆ; ಶಿಕ್ಷಕಿಯ ಮುಂದೆಯೇ ಸಹಪಾಠಿಗೆ ಬೆದರಿಕೆಯೊಡ್ಡಿದ ಪುಟ್ಟ ಬಾಲಕಿ

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಕುರಿತು ಮಾತನಾಡಿರುವ ಅಶ್ವಿನ್​, ಅವರು ತುಂಬಾ ರಿಲ್ಯಾಕ್ಸ್ಡ್​​ ಆಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಗೌತಮ್​ರನ್ನು ನಾನು ರಿಲ್ಯಾಕ್ಸ್ಡ್​​ ರಾಂಚೋ ಎಂದು ಕರೆಯಲು ಇಷ್ಟಪಡುತ್ತೇನೆ. ಯಾವುದೇ ಒತ್ತಡವಿಲ್ಲದೇ ಕೆಲಸವನ್ನು ನಿಭಾಯಿಸುತ್ತಾರೆ. ಆದರೆ, ರಾಹುಲ್​ ದ್ರಾವಿಡ್​ ಮಾತ್ರ ತುಂಬಾ ರೆಜಿಮೆಂಟೆಡ್​ ಆಗಿದ್ದು, ಸ್ಟ್ರಿಕ್ಟ್​ ಆಗಿರುತ್ತಾರೆ. ಆದರೆ, ಗಂಭೀರ್​ ಮಾತ್ರ ಶಾಂತವಾಗಿರುತ್ತಾರೆ ಮತ್ತು ಹುಡುಗರಿಗೆ ಹೆಚ್ಚು ಇಷ್ಟವಾಗುತ್ತಾರೆ ಎಂದು ಆರ್​. ಅಶ್ವಿನ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಯುಎಸ್​ಎ-ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಎರಡನೇ ಬಾರಿಗೆ ಚಾಂಪಿಯನ್​​ ಮಾಡಿದ ಕೀರ್ತಿ ರಾಹುಲ್​​ ದ್ರಾವಿಡ್​ ಅವರಿಗೆ ಸಲ್ಲುತ್ತದೆ. ರಾಹುಲ್​ ದ್ರಾವಿಡ್​ ಬಳಿಕ ಟೀಮ್​ ಇಂಡಿಯಾದ ಕೋಚ್​ ಆಗಿ ಗೌತಮ್​ ಗಂಭೀರ್​ ಅಧಿಕಾರಿ ವಹಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧದ ಮೊದಲ ಸರಣಿಯಲ್ಲೇ ಸಿಹಿ-ಕಹಿ ಲಭಿಸಿದೆ. ಇದಲ್ಲದೆ ಗಂಭೀರ್​ ಮುಂದೆ ಸವಾಲುಗಳ ಸರಣಿಯೇ ಇದ್ದು ತಂಡವನ್ನು ಸಜ್ಜುಗೊಳಿಸಬೇಕಿದೆ.

Share This Article

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…

ಪ್ರಯಾಣ ಮಾಡುವಾಗ ವಾಂತಿ ಬರುತ್ತದೆಯೇ? ಚಿಂತಿಸಬೇಡಿ, ಈ ಸಿಂಪಲ್​​ ಟಿಪ್ಸ್​ ಅನುಸರಿಸಿ ಸಾಕು! Vomiting while Travelling

Vomiting while Travelling : ಸಾಮಾನ್ಯವಾಗಿ ಕೆಲ ಜನರು ಪ್ರಯಾಣವನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಕಾರು, ಬಸ್​ನಂತಹ…

Health Tips: ಚಳಿಗಾಲದಲ್ಲಿ ಕೆಮ್ಮು, ನೆಗಡಿ ಹೋಗಲಾಡಿಸಲು ಹೀಗೆ ಮಾಡಲೇಬೇಕು!

Health Tips:   ಚಳಿಗಾಲ   ಶುರುವಾಗಿದೆ ಎಂದರೆ ಸೀಸನಲ್ ಕಾಯಿಲೆಗಳೂ ನಮ್ಮನ್ನು ಕಾಡುತ್ತಿವೆ. ಅದರಲ್ಲೂ ಶೀತ ವಾತಾವರಣದಲ್ಲಿ…