

ನವದೆಹಲಿ: ಮಕ್ಕಳು ದೇವ ಸಮಾನ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಚಿಕ್ಕ ಮಕ್ಕಳು ಏನೇ ಮಾತನಾಡಿದರೂ ಅಧೂ ನೋದಲು ಚೆಂದವಾಗಿರುತ್ತದೆ. ಪುಟ್ಟ ಮಕ್ಕಳಲ್ಲಿ ಜಾತಿ ಭೇದಗಳಾಗಿರಲಿ ಅಥವಾ ಧರ್ಮದ ಬಗ್ಗೆ ದ್ವೇಷ ಕಾಣಿಸುವುದಿಲ್ಲ. ಆದರೆ, ಇಲ್ಲೊಂದು ಪುಟ್ಟ ಬಾಲಕಿ ನೀಡಿರುವ ಹೇಳಿಕೆ ವೈರಲ್ ಆಗಿದ್ದು, ಪುಟ್ಟ ಬಾಲಕಿ ಆಡಿರುವ ದ್ವೇಷಪೂರಿತ ಮಾತುಗಳಿಂದ ನೆಟ್ಟಿಗರು ಆಘಾತಕ್ಕೆ ಒಳಗಾಗಿದ್ದಾರೆ.
ಮುಸ್ಲಿಂ ಶಾಲಾ ಬಾಲಕಿಯೊಬ್ಬಳು ತನ್ನ ಸಹಪಾಠಿ ಹಿಂದೂ ಎಂಬ ಕಾರಣಕ್ಕೆ ಆಕೆಯನ್ನು ತಾನು ದೊಡ್ಡವಳಾದ ಮೇಲೆ ಕೊಲ್ಲುತ್ತೇನೆ ಎಂದು ಶಿಕ್ಷಕಿಯ ಮುಂದೆ ಹೇಳುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿಕ್ಕ ಮಗುವಿನ ಬಾಯಲ್ಲಿ ಇಷ್ಟೊಂದು ದ್ವೇಷಪೂರಿತ ಮಾತು ಬರಲು ಹೇಗೆ ಸಾಧ್ಯ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಮುಸ್ಲಿಂ ಧರ್ಮದ ಬಾಲಕಿಯೊಬ್ಬಳು ತನ್ನ ಸಹಪಾಠಿ ಪಲ್ಲವಿ ಹಿಂದೂ ಎಂಬ ಕಾರಣಕ್ಕೆ ನಾನು ದೊಡ್ಡವಳಾದ ಮೇಲೆ ನಮ್ಮ ಮನೆಯಲ್ಲಿರುವ ಬಂದೂಕಿನಿಂದ ಆಕೆಯನ್ನು ಗುಂಡಿಟ್ಟು ಕೊಲ್ಲುತ್ತೇನೆ. ಶಿಕ್ಷಕಿ ನೀನು ಯಾವ ದೇವರನ್ನು ಪೂಜಿಸುತ್ತೀಯಾ ಎಂದು ಆ ಬಾಲಕಿಯ ಬಳಿ ಕೇಳಿದಾಗ ಆಕೆ ಅಲ್ಲಾ ಎಂದು ಉತ್ತರಿಸಿ, ಅಲ್ಲಾನನ್ನು ಪೂಜಿಸದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈವರೆಗೆ 60 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಅನೇಕರು ಬಾಲಕಿಯ ಪೋಷಕರನ್ನು ದೂಷಿಸಿದ್ದು, ಈ ಬಗ್ಗೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.