ಅಧ್ಯಕ್ಷರಾಗಿ ರವಿ ಪೂಜಾರಿ ಆಯ್ಕೆ

adhyaksha
Published on

ಕೋಟ: ಅನ್ಯೋನ್ಯತಾ ರಿಕ್ಷಾ ಚಾಲಕ ಮತ್ತು ಮಾಲೀಕರ ಸಂಘ ಸಾಸ್ತಾನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸವಿನಯ ಯುವಕ ಮಂಡಲದ ಕಚೇರಿಯಲ್ಲಿ ಜರುಗಿತು. ಸಂಘದ ಸದಸ್ಯರಾದ ಅಣಲಾಡಿ ಮಠದ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿ ಆಯ್ಕೆಯಾದ ವಿಜಯ ಪೂಜಾರಿ, ಹಿರಿಯ ಸದಸ್ಯ ನಾರಾಯಣ್ ಮತ್ತು ಮಕ್ಕಳ ಕುಣಿತ ಭಜನಾ ತಂಡದ ತರಬೇತುದಾರ ಕೃಷ್ಣ ಬಂಗೇರ ಅವರನ್ನು ಗೌರವಿಸಲಾಯಿತು.

2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರವಿ ಪೂಜಾರಿ ಎಡಬೆಟ್ಟು, ಕಾರ್ಯದರ್ಶಿ ಶಂಕರ್ ಪೂಜಾರಿ ಬೆಣ್ಣೆಕುದ್ರು, ಖಜಾಂಚಿ ರಾಘವೇಂದ್ರ ಗಾಣಿಗ ಚಲ್ಲಮಕ್ಕಿ, ಉಪಾಧ್ಯಕ್ಷರಾಗಿ ಸ್ಟಾೃನಿ ವರ್ಗಿಸ್, ಜತೆ ಕಾರ್ಯದರ್ಶಿಯಾಗಿ ಚಂದ್ರ ಪೂಜಾರಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ವಿಜಯ ಪೂಜಾರಿ ಸ್ವಾಗತಿಸಿ, ಸಂಘದ ಸದಸ್ಯ ಕೃಷ್ಣ ಬಂಗೇರ ವರದಿ, ಮಾಜಿ ಖಜಾಂಚಿ ರಾಘವೇಂದ್ರ ಪೂಜಾರಿ ವಾರ್ಷಿಕ ಲೆಕ್ಕಾಚಾರ ಮಂಡಿಸಿದರು. ಮಾಜಿ ಕಾರ್ಯದರ್ಶಿ ಭಾಸ್ಕರ್ ಪುತ್ರನ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net