ಏಕಾಗ್ರತೆಯೊಂದಿಗೆ ದೇವರಿಗೆ ಸಂಪೂರ್ಣ ಶರಣಾಗತಿ

hbr
Published on

ಹೆಬ್ರಿ: ಕಾರಣಿಕ ಕ್ಷೇತ್ರಗಳಲ್ಲಿ ಇಷ್ಟಾರ್ಥ ಸಿದ್ಧಿಗೆ ಪೂರಕವಾದ ವೈಬ್ರೇಷನ್ ಕಾಣಸಿಗುತ್ತದೆ. ಮುದ್ರಾಡಿ ಭದ್ರಕಾಳಿ ಕ್ಷೇತ್ರ ಇದಕ್ಕೆ ಸಾಕ್ಷಿ. ಭಕ್ರೆಯ ವಿಠಲ ಭಟ್ಟರು ಸಿದ್ಧಿ ಪುರುಷರು. ಇಂತಹ ಕ್ಷೇತ್ರಗಳಲ್ಲಿ ತಮಗಾಗಿ ಏನನ್ನೂ ಬೇಡದೆ ಏಕಾಗ್ರತೆಯೊಂದಿಗೆ ದೇವರಿಗೆ ಸಂಪೂರ್ಣ ಶರಣಾಗತಿಯಾಗುವುದು ನಮ್ಮೆಲ್ಲ ದರ್ಶನದ ಉದ್ದೇಶ ಎಂದು ಬೆಂಗಳೂರು ಕ್ರೆಡೈ ಮಾಜಿ ಅಧ್ಯಕ್ಷ ಏರ್ಯಬೀಡು ಬಾಲಕೃಷ್ಣ ಹೆಗ್ಡೆ ಹೇಳಿದರು.

ಶ್ರೀ ಭಕ್ರೆಮಠ ಕ್ಷೇತ್ರ ಕೆಂಡೋತ್ಸವದಲ್ಲಿ ಶುಕ್ರವಾರ ಧಾರ್ಮಿಕ ಸಭೆಯಲ್ಲಿ ದೇವಳದ ವತಿಯಿಂದ ನೀಡಿದ ಮುದ್ರಾಡಿ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮಂಗಳೂರಿನ ಬಾಲಂಭಟ್ ಮನೆ ಡಾ.ಸತ್ಯಕೃಷ್ಣ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಜಿಪಂ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಭಕ್ರೇಮಠ ವಿಠಲ ಭಟ್ಟ ಸ್ಮಾರಕ ಅರ್ಚಕ ಪ್ರಶಸ್ತಿಯನ್ನು ಶಿವಪುರ ದೇಗುಲ ಅರ್ಚಕ ರಂಗನಾಥ ಭಟ್ ಅವರಿಗೆ ಪ್ರದಾನ ಮಾಡಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ.ನಾಗರಾಜ್, ಮುದ್ರಾಡಿ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರ್ತಿ, ಆಡಳಿತ ಮೊಕ್ತೇಸರ ಡಾ.ವಾಸುದೇವ ಭಟ್, ಮುದ್ರಾಡಿ ಪಾಂಡುರಂಗ ಪ್ರಭು, ಪೂರ್ಣಾನಂದ ಭಟ್, ಸ್ಥಳದಾನಿ ಸುಂದರ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿ, ಡಾ.ಭಕ್ರೆ ವಾಸುದೇವ ಭಟ್ ಸ್ವಾಗತಿಸಿದರು. ಮಠದ ಕಾರ್ಯದರ್ಶಿ ರಾಮಕೃಷ್ಣ ಭಟ್ ಸಹಕರಿಸಿದರು.

ಧರ್ಮದೈವದ ಕೋಲ

ಏರ್ಯಬೀಡು ಬಾಲಕೃಷ್ಣ ಹೆಗ್ಡೆ ಮುದ್ರಾಡಿ ಭಕ್ತಿಸುಧೆ ನಡೆಯಿತು. ಧಾರ್ಮಿಕ ಸಭೆ ಬಳಿಕ ಮಹಿಷಮರ್ದಿನಿ ಯಕ್ಷಕಲಾ ಪ್ರತಿಷ್ಠಾನ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಲೆ ಶಶಿಕಲಾ ಸ್ವಯಂವರ, ಉತ್ಸವದಲ್ಲಿ ಕಟ್ಟೆ ಪೂಜೆ, ಕೆಂಡೋತ್ಸವ, ರಂಗಪೂಜೆ ದರ್ಶನಬಲಿ, ಧರ್ಮದೈವದ ಕೋಲ, ತುಲಾಭಾರ ಸೇವೆ, ಮಹಾಮಂಗಳಾರತಿ, ಮಹಾಸಂಪ್ರೋಕ್ಷಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net