ಜಟ್ಟಿಗ ಕ್ಷೇತ್ರದ ಸುವರ್ಣ ಸಂಭ್ರಮ

gan-11
Published on

ಗಂಗೊಳ್ಳಿ: ಶ್ರೀ ಗ್ರಾಮ ಜಟ್ಟಿಗ ದೇವಸ್ಥಾನ ಮಲ್ಯರಬೆಟ್ಟು, ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ಹಾಗೂ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಸುವರ್ಣ ಸಂಭ್ರಮ ಸಮಾರಂಭ ಗಂಗೊಳ್ಳಿ ಶ್ರೀ ಗ್ರಾಮ ಜಟ್ಟಿಗ ದೇವಸ್ಥಾನ ವಠಾರದಲ್ಲಿ ಮಾ.25ರಿಂದ 27ರವರೆಗೆ ನಡೆಯಲಿದೆ.

ಮಾ.25ರಂದು ಗಣೇಶ ಪೂಜೆ, ಅಷ್ಟೋತ್ತರ ಶತಬ್ರಹ್ಮಕಲಶ ಸ್ಥಾಪನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 26ರಂದು ಕಲಶ ಸ್ನಪನಾಧಿವಾಸ ಹೋಮ, ತತ್ವಹೋಮ, ಅಷ್ಟೋತ್ತರ ಕುಂಭಾಭಿಷೇಕ, 10.50ಕ್ಕೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಅಮೃತ ಹಸ್ತದಿಂದ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಸಂಜೆ 7ಕ್ಕೆ ದೇವರ ಪಲ್ಲಕಿ ಉತ್ಸವ ನಡೆಯಲಿದೆ.

27ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಹಿಂಪ ಮುಖಂಡ ಕೆ.ಪ್ರೇಮಾನಂದ ಶೆಟ್ಟಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಕೊಗ್ಗ ಖಾರ್ವಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ, ಕೆ.ಗೋಪಾಲ ಪೂಜಾರಿ, ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ರಾಜೇಂದ್ರ ಸುವರ್ಣ, ಸದಾಶಿವ ಖಾರ್ವಿ, ಮೋಹನ ಬಾನವಾಳಿಕರ್, ಮಡಿ ಶಂಕರ ಖಾರ್ವಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net