More

    ರವಿಕಿಶನ್​ ದಿನ ಶುರುವಾಗ್ತಿದ್ದದ್ದೇ ಮಾದಕವಸ್ತುಗಳಿಂದ … ಅನುರಾಗ್​ ಸ್ಫೋಟಕ ಹೇಳಿಕೆ

    ಮುಂಬೈ: ಸೋಮವಾರವಷ್ಟೇ ನಟ ಮತ್ತು ಸಂಸದ ರವಿಕಿಶನ್​ ಸಂಸತ್ತಿನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದರು. ಬಾಲಿವುಡ್​ನಲ್ಲಿ ಹೆಚ್ಚುತ್ತಿರುವ ಡ್ರಗ್ಸ್​ ಬಳಕೆಯ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಈ ವಿಷಯವಾಗಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದರು.

    ಇದನ್ನೂ ಓದಿ: ದಾಖಲೆ ಬರೆಯಿತು ಕಾಲಿವುಡ್​ ನಟ ವಿಜಯ್​ ಮಾಡಿದ ಆ ಒಂದೇ ಒಂದು ಟ್ವೀಟ್​!

    ‘ದೇಶದ ಯುವಜನತೆಯನ್ನು ದಿಕ್ಕುತಪ್ಪಿಸಲು ನೆರೆರಾಷ್ಟ್ರಗಳು ಸಂಚು ರೂಪಿಸುತ್ತಿವೆ. ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗಿ ಪಂಜಾಬ್​ ಮತ್ತು ನೇಪಾಳದ ಮೂಲಕ ಇಲ್ಲಿಗೆ ಡ್ರಗ್ಸ್​ ತರಲಾಗುತ್ತಿದೆ. ಡ್ರಗ್ಸ್​ ಚಟ ಹೆಚ್ಚಾಗುತ್ತಿದೆ. ಅದರಲ್ಲೂ ಚಿತ್ರರಂಗದಲ್ಲೂ ಜಾಸ್ತಿಯಾಗಿದೆ. ಈ ವಿಷಯವಾಗಿ ಎನ್​ಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದರು.

    ಈಗ ಅವರ ಮಾತಿಗೆ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಟಾಂಗ್​ ಕೊಟ್ಟಿದ್ದಾರೆ. ಬಾಲಿವುಡ್​ನಲ್ಲಿ ಯಾರಾದರೂ ಅತೀ ಹೆಚ್ಚು ಮಾದಕವಸ್ತುಗಳನ್ನು ಬಳಿಸಿದ್ದಾರೆ ಎಂದರೆ ಅದು ರವಿಕಿಶನ್​ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ರವಿಕಿಶನ್​ ಅವರು ನನ್ನ ‘ಮುಕ್ಕಾಬಾಜ್​’ ಚಿತ್ರದಲ್ಲಿ ನಟಿಸಿದ್ದರು. ರವಿಕಿಶನ್​ ಅವರ ದಿನ ಶುರುವಾಗುತ್ತಿದ್ದುದೇ ಮಾದಕವಸ್ತುಗಳಿಂದ. ಬಹುಶಃ ಬಾಲಿವುಡ್​ನಲ್ಲಿ ಯಾರಾದರೂ ಅತೀ ಹೆಚ್ಚು ಕಾಲ ಮಾದಕವಸ್ತುಗಳನ್ನು ಬಳಸಿದ್ದಾರೆಂದರೆ ಅದು ರವಿಕಿಶನ್​ ಎಂದು ಎಲ್ಲರಿಗೂ ಗೊತ್ತಿದೆ. ಹಾಗಂತ ಅವರು ಯಾವತ್ತೂ ಕೆಟ್ಟದಾಗಿ ವರ್ತಿಸಲಿಲ್ಲ. ಮೃಗದಂತೆ ಆಡಲಿಲ್ಲ. ಬಹಳ ಚೆನ್ನಾಗಿಯೇ ಕೆಲಸ ಮಾಡಿದರು’ ಎಂದು ಅನುರಾಗ್​ ಹೇಳಿದ್ದಾರೆ.

    ಇದನ್ನೂ ಓದಿ: ಹಾಗಾದ್ರೆ ಕಂಗನಾ ಸಹ ಸಾಫ್ಟ್​ ಪೋರ್ನ್​ ನಟಿಯಾ?ಇದು ನೆಟ್ಟಿಗರ ಪ್ರಶ್ನೆ …

    ಬಹುಶಃ ಇದೀಗ ಅವರ ಸಂಸದರಾಗಿರುವುದರಿಂದ ಅವೆಲ್ಲವನ್ನೂ ಬಿಟ್ಟಿರಬಹುದು ಎಂದಿರುವ ಅನುರಾಗ್​ ಕಶ್ಯಪ್​, ‘ಈಗವರು ಬಿಟ್ಟಿರಬಹುದು. ಆದರೆ, ಆ ಬಗ್ಗೆ ಮಾತನಾಡಿದ್ದು ಆಶ್ಚರ್ಯವಾಯಿತು’ ಎಂದು ಅನುರಾಗ್​ ಹೇಳಿಕೊಂಡಿದ್ದಾರೆ.

    2014, ಜುಲೈ 7ರಂದು ಸಂಜನಾ ಮಾಡಿದ್ದ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​: ಗಲ್ರಾನಿ ಗುಟ್ಟು ರಟ್ಟು!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts