ದಾಖಲೆ ಬರೆಯಿತು ಕಾಲಿವುಡ್​ ನಟ ವಿಜಯ್​ ಮಾಡಿದ ಆ ಒಂದೇ ಒಂದು ಟ್ವೀಟ್​!

Vijay
Published on

ಚೆನ್ನೈ: ತಮಿಳಿನ ಸೂಪರ್​ಸ್ಟಾರ್​ ದಳಪತಿ ವಿಜಯ್​ ಇದೀಗ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅವರು ಮಾಡಿದ ದಾಖಲೆಯನ್ನು ಭಾರತದಲ್ಲಿ ಇಲ್ಲಿಯವರೆಗೂ ಯಾವ ಸಿನಿಮಾ ಸ್ಟಾರ್​ಗಳೂ ಮಾಡಿಲ್ಲ. ಬಾಲಿವುಡ್​ ಘಟಾನುಘಟಿ ಸ್ಟಾರ್​ಗಳಿಂದಲೂ ಅದು ಸಾಧ್ಯವಾಗಿಲ್ಲ.

ಹೌದು, ಫೆಬ್ರವರಿಯಲ್ಲಿ ಮಾಸ್ಟರ್ ಸಿನಿಮಾ ಶೂಟಿಂಗ್​ ಸಂದರ್ಭದಲ್ಲಿ ತಮಿಳುನಾಡಿನ ನೇವೇಲಿಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಜಯ್​ ಸೆಲ್ಫಿಯೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಸೆಲ್ಫಿಯೇ ಇದೀಗ ಇಲ್ಲಿಯವರೆಗೂ ಯಾರೂ ಮಾಡದ ದಾಖಲೆಯೊಂದನ್ನು ಮಾಡಿದೆ.

‘ಥ್ಯಾಂಕ್ಯು ನೇವೇಲಿ’ ಎಂದಷ್ಟೇ ಬರೆದುಕೊಂಡು, ಟ್ವಿಟರ್​ನಲ್ಲಿ ಫೋಟೋ ಪೋಸ್ಟ್ ಮಾಡಿದ್ದೇ ತಡ ಬರೋಬ್ಬರಿ 3.6 ಲಕ್ಷ ಲೈಕ್ಸ್​ಗಳು ಆ ಫೋಟೋಕ್ಕೆ ಬಂದಿದ್ದವು. ಒಂದೂವರೆ ಲಕ್ಷ ಬಾರಿ ರೀಟ್ವಿಟ್​ ಆಗಿತ್ತು. ಟ್ವಿಟರ್ ಇಂಡಿಯಾ ಪ್ರಕಾರ ಈವರೆಗೂ ಭಾರತದ ಸಿನಿಮಾ ಸೆಲೆಬ್ರಿಟಿಯೊಬ್ಬರಿಗೆ ಸಿಕ್ಕ ಅತ್ಯುತ್ತಮ ಪ್ರತಿಕ್ರಿಯೆ ಇದಾಗಿದೆಯಂತೆ.

ಸದ್ಯ ವಿಜಯ್ ಅವರ ಮಾಸ್ಟರ್ ಸಿನಿಮಾ ಬಿಡುಗಡೆ ಸಿದ್ಧವಾಗಿದ್ದು, ಇನ್ನುಳಿದಂತೆ ಹಲವು ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದು ಆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net