ಶೂಟಿಂಗ್​ಗೆ ಸಂಜಯ್​ ದತ್ ತಯಾರಿ; ಕೆಜಿಎಫ್​ ಅನ್ಕೊಂಡ್ರೆ ನಿಮ್ಮ ಊಹೆ ತಪ್ಪಾಗಬಹುದು!

Sanjay-Dutt_16d598e8b05_medium
Published on

ಮುಂಬೈ: ಬಾಲಿವುಡ್ ನಟ ಸಂಜಯ್​ ದತ್​ ಇತ್ತೀಚೆಗಷ್ಟೇ ಕ್ಯಾನ್ಸರ್​ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿ ಆಗಮಿಸಿ ಸಿನಿಮಾ ಶೂಟಿಂಗ್​ನಲ್ಲಿಯೂ ಭಾಗವಹಿಸುವುದಾಗಿ ಹೇಳಿಕೊಂಡಿದ್ದರು ಸಂಜಯ್​. ಅದರಂತೆ ಅಕ್ಷಯ್​ ಕುಮಾರ್ ನಾಯಕತ್ವದ ಪೃಥ್ವಿರಾಜ್​ ಚೌಹಾಣ್ ಸಿನಿಮಾ ಕೆಲಸಗಳು ಶುರುವಾಗಿದ್ದು, ಆ ಚಿತ್ರದ ಶೂಟಿಂಗ್​ನಲ್ಲಿ ಸಂಜಯ್​ ದತ್ ಸಹ ಪಾಲ್ಗೊಳ್ಳಲಿದ್ದಾರಂತೆ.

ಈಗಾಗಲೇ ಈ ಚಿತ್ರದ ಶೇ.90 ಭಾಗದ ಚಿತ್ರೀಕರಣ ಮುಗಿಸಿರುವ ಸಂಜಯ್​ ದತ್, ಇನ್ನು ಏಳೆಂಟು ದಿನದ ಶೂಟಿಂಗ್​ ಮಾತ್ರ ಬಾಕಿ ಉಳಿದುಕೊಂಡಿದೆ. ಅದು ಮುಗಿದರೆ ಇಡೀ ಚಿತ್ರ ಕಂಪ್ಲೀಟ್​ ಆದಂತೆ. ಹಾಗಾದರೆ, ಶೂಟಿಂಗ್​ ಯಾವಾಗ? ದೀಪಾವಳಿ ಮುಗಿಯುತ್ತಿದ್ದಂತೆ ಪೃಥ್ವಿರಾಜ್​ ಚಿತ್ರದ ಶೂಟಿಂಗ್​ ಆರಂಭಿಸಲು ತಂಡ ಪ್ಲಾನ್​ ಮಾಡಿಕೊಂಡಿದೆ. ಆಗ ಸಂಜಯ್​ ದತ್ ಸಹ ಪಾಲ್ಗೊಳ್ಳಲಿದ್ದಾರಂತೆ.

ಇನ್ನು ಇತ್ತೀಚೆಗಷ್ಟೇ ರಣಬೀರ್​ ಕಪೂರ್​ ನಟಿಸುತ್ತಿರುವ ಶಂಶೇರಾ ಸಿನಿಮಾದಲ್ಲಿಯೂ ಸಂಜಯ್​ ದತ್​ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಆ ಚಿತ್ರದ ಚಿತ್ರೀಕರಣವನ್ನೂ ಇತ್ತೀಚೆಗಷ್ಟೇ ಮುಗಿಸಿದ್ದಾರೆ ದತ್​. ಸದ್ಯ ಚಿಕಿತ್ಸೆಗೆಂದು ಕುಟುಂಬದೊಟ್ಟಿಗೆ ದುಬೈಗೆ ತೆರಳಿರುವ ಸಂಜಯ್​, ನವೆಂಬರ್​ ವೇಳೆಗೆ ಮರಳುವ ಸಾಧ್ಯತೆ ಇದೆ. ಇತ್ತ ಕನ್ನಡದ ಕೆಜಿಎಫ್​ ಸಿನಿಮಾದಲ್ಲಿಯೂ ಅವರು ನಟಿಸಲಿದ್ದು, ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಲಭ್ಯವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net