More

    PHOTOS/ ಪೇಜ್‌-3 ಪಾರ್ಟಿಗಳಿಗೆ ಫೇಮಸ್‌ ಆಗಿತ್ತಂತೆ ಅಕುಲ್​ ಒಡೆತನದ ಈ ರೆಸಾರ್ಟ್!

    ಬೆಂಗಳೂರು: ಖ್ಯಾತ ನಿರೂಪಕ ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್​ನಲ್ಲಿ ಪೇಜ್ 3 ಪಾರ್ಟಿ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಡ್ರಗ್ಸ್​ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿರುವ ಡ್ರಗ್ಸ್​ ಪೆಡ್ಲರ್​ಗಳು ಅಕುಲ್​ರ ರೆಸಾರ್ಟ್​ನಲ್ಲಿ ಪಾರ್ಟಿ ಮಾಡುತ್ತಿದ್ದಾಗಿ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ವಿಚಾರಣೆ ಎದುರಿಸಲು ಸಿಸಿಬಿ ಕಚೇರಿಗೆ ಅಕುಲ್ ತೆರಳಿದ್ದಾರೆ.

    ದೊಡ್ಡಬಳ್ಳಾಪುರ ಬಳಿಯ ಲಘುಮೇನಹಳ್ಳಿ ಬಳಿ ಅಕುಲ್​ಗೆ ಸೇರಿದ ‘ಸನ್ ಶೈನ್ ಬೈ ಜೆಡ್’ ರೆಸಾರ್ಟ್ ಇದೆ. ಲಾಕ್​ಡೌನ್ ಸಮಯದಲ್ಲಿ ಅಂದರೆ ಏ.20ರಂದು ಅಕುಲ್ ಬಾಲಾಜಿ ಈ ರೆಸಾರ್ಟ್​ನಲ್ಲಿ ಪಾರ್ಟಿ ಮಾಡಿದ್ದರು ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆಗೆ ಸ್ಥಳೀಯ ನಿವಾಸಿ ಮಂಜುನಾಥ್ ದೂರು ನೀಡಿದ್ದರು. ಪ್ರಕರಣ ಸಂಬಂಧ ಎಫ್ಐಆರ್ ಕೂಡ ದಾಖಲಾಗಿತ್ತು.

    ಇನ್ನು ಅಕುಲ್​ರ ರೆಸಾರ್ಟ್​ಗೆ ಹಲವು ಬಾರಿ ನಟಿ ರಾಗಿಣಿ ದ್ವಿವೇದಿ ಮತ್ತು ರವಿಶಂಕರ್ ಹೋಗಿದ್ದರು ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಡ್ರಗ್ಸ್​ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅಂದಹಾಗೆ ಅಕುಲ್​ರ ಆ ರೆಸಾರ್ಟ್​ ಹೇಗಿದೆ ಗೊತ್ತಾ? ಇಲ್ಲಿವೆ ಆ ಫೋಟೋಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts