ಜತೆಗೆ, ರವೀನಾ ಬಗ್ಗೆಯೂ ಪತ್ರದ ಮೂಲಕ ತಿಳಿಸಿರುವ ಪ್ರಧಾನಿ, ''ಸಿನಿಮಾ ರಂಗದಲ್ಲಿ ರವೀನಾ ಯಶಸ್ಸು, ಸುದೀರ್ಘ ಪಯಣ, ನಟಿಯ ವ್ಯಕ್ತಿತ್ವ ಗಮನಿಸಿದರೆ, ನಿಮ್ಮ ತಂದೆಯವರು ನಿಮಗೆ ನೀಡಿರುವ ಮಾರ್ಗದರ್ಶನ, ನಿಮಗೆ ಅವರು ನೀಡಿರುವ ಜೀವನದ ಮೌಲ್ಯಗಳ ಪಾಠಗಳು ಎಲ್ಲಿರಗೂ ಅರ್ಥವಾಗುತ್ತೆ'', ಎಂದು ಹೇಳಿದ್ದಾರೆ. ಇನ್ನು, ಮೋದಿ ಅವರ ಈ ಪತ್ರವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ನಟಿ ರವೀನಾ, ''ಅಪ್ಪ ಅಗಲಿ ಇಂದಿಗೆ ಹದಿಮೂರು ದಿನಗಳಾದವು. ಮೋದಿಯವರ ಮಾತುಗಳಿಗೆ ತುಂಬು ಹೃದಯದ ಧನ್ಯಾವದಗಳು'' ಎಂಬ ಕ್ಯಾಪ್ಷನ್ ನೀಡಿದ್ದಾರೆ. ಸದ್ಯ, ಮೋದಿಯವರು ನಟಿಗೆ ಸಂತಾಪ ಸೂಚಿಸಿರುವ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.