ಒಂದು ಅಂಗಡಿ ಉದ್ಘಾಟನೆಗೆ ಬಂದ್ರೆ ಸಮಂತಾ ಪಡೆಯುವ ಸಂಭಾವನೆ ಇಷ್ಟೋಂದಾ?

Published on
ನಟಿ ಸಮಂತಾ ರುತ್ ಪ್ರಭುಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆ. ಹೌದು, ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿ, ‘ಪುಷ್ಪ’ ಸಿನಿಮಾದ ಐಟಂ ಹಾಡು ಸೂಪರ್​ ಹಿಟ್​ ಆದ ನಂತರ ಇಡೀ ದೇಶದಲ್ಲಿ ನಟಿಯ ಖ್ಯಾತಿ ಹೆಚ್ಚಾಗಿದೆ. ಇದೀಗ, ನಟಿಗೆ ಹಲವಾರು ಸಿನಿಮಾ ಅವಕಾಶಗಳು ಹರಿದುಬರುತ್ತಿದ್ದು, ಅದಕ್ಕೆ ತಕ್ಕಂತೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಹಲವು ಮಾಹಿತಿಗಳ ಪ್ರಕಾರ ನಟಿ ಸಮಂತಾ ಕೇವಲ ‘ಪುಷ್ಪ’ ಸಿನಿಮಾದ ಐಟಂ ಹಾಡಿಗೆಯೇ ಹೆಚ್ಚು ಕಡಿಮೆ 2 ಕೋಟಿ ಸಂಭಾವನೆ ಪಡೆದಿದ್ದಾರಂತೆ.
ಇನ್ನು, ಬರೀ ಸಿನಿಮಾಗಳು ಅಲ್ಲದೇ, ಸಮಂತಾ ಹಲವು ಬೇರೆ ದಾರಿಗಳಲ್ಲಿ ಸಹ ಹಣ ಗಳಿಸುತ್ತಿದ್ದಾರಂತೆ. ಹೌದು, ನಟಿ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಕಮರ್ಷಿಯಲ್​ ಬ್ರ್ಯಾಂಡ್​ಗಳನ್ನು ಪ್ರಮೋಟ್​ ಮಾಡುವುದರ ಮೂಲಕ, ಜಾಹೀರಾತುಗಳಲ್ಲಿ ನಟಿಸಿ ಕೂಡಾ ಸಂಭಾವನೆ ಪಡೆಯುತ್ತಾರೆ. ಜೊತೆಗೆ, ಕೆಲವು ಅಂಗಡಿಗಳ ಉದ್ಘಾಟನೆಗೆ ಅತಿಥಿಯಾಗಿ ಹೋಗುವ ಮೂಲಕವೂ ಹಣ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡುತ್ತಿವೆ. ಅಂದಹಾಗೆ, ಮೂಲಗಳ ಪ್ರಕಾರ ಯಾವುದಾದರೂ ಅಂಗಡಿಗಳ ಉದ್ಘಾಟನೆಗೆ ಹೋದರೆ ಸಮಂತಾ ಅದರಲ್ಲಿ ಕೇವಲ ಒಂದು ಅಂಗಡಿಗೆ ಬರೋಬ್ಬರಿ 15 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ.
ಶೋರೂಂಗಳ ಉದ್ಘಾಟನೆಗೆ ಹೋಗಿ ಹಣ ಗಳಿಸಬೇಕಾದ ಅನಿವಾರ್ಯತೆ ನಟಿಗೆ ಇಲ್ಲದಿದ್ದರೂ ಅವರು ಇಂಥ ಕಾರ್ಯಕ್ರಮಗಳಿಗೆ ಅಹ್ವಾನ ಸ್ವೀಕರಿಸಿ ತೆರಳುತ್ತಾರೆ. ಇನ್ನು, ಸಮಂತಾ 15 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಪಡೆಯುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ, ನಟಿ ಆಂಧ್ರದಲ್ಲಿ ಒಂದು ಅಂಗಡಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದು, ಅಲ್ಲಿ ಸೇರಿದ್ದ ಅವರ ಸಾವಿರಾರು ಅಭಿಮಾನಿಗಳನ್ನು ಕಂಡು ದಿಲ್ ಖುಷ್ ಆಗಿದ್ದರು. ಚಿತ್ರರಂಗದ ಕೆಲಸದ ವಿಷಯಕ್ಕೆ ಬಂದರೆ, ನಟಿ ಸಮಂತಾ ಅವರು ಅಭಿನಯಿಸಿರುವ ‘ಶಾಕುಂತಲಂ’ ಚಿತ್ರ ರಿಲೀಸ್​ಗಾಗಿ ಕಾಯುತ್ತಿದ್ದು, ಈ ಸಿನಿಮಾದ ಮೊದಲ ಲುಕ್ ಇತ್ತೀಚೆಗೆ ಬಹಳಷ್ಟು ಸದ್ದು, ಸುದ್ದಿ ಮಾಡಿತ್ತು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net