ಹೌದು, ತಮ್ಮ ಬೇಬಿ ಬಂಪ್ ಕಾಣುವಂತೆ ಕ್ಯಾಮೆರಾಗೆ ಪೋಸ್ ನೀಡಿದ್ದು, ನಟಿ ಸಂಜನಾ ಅವರ ಜೊತೆಗೆ ಅವರ ಯೋಗ ಟೀಚರ್ ಕೂಡಾ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನಟಿಯ ಅಭಿಮಾನಿಗಳು ಸಂಜನಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದು, ಶುಭ ಹಾರೈಸಿದ್ದಾರೆ. ಇನ್ನು, ಅಭಿಮಾನಿಗಳು ನಟಿಯನ್ನು ಹಲವು ಪ್ರಶ್ನೆಗಳನ್ನು ಕೇಳಿದ್ದು, ಅವುಗಳಿಗೆ ನಟಿ ಸಂಜನಾ ಉತ್ತರ ನೀಡಿದ್ದಾರೆ. ಅಂದಹಾಗೆ, ನಟಿ ಈಗ ಪ್ರೆಗ್ನೆಂಸಿಯ 7ನೇ ತಿಂಗಳಿಗೆ ಕಾಲಿಟ್ಟಿದ್ದಾರೆ.