More

    ‘ಏಕ್ ಲವ್ ಯಾ’ ಸಿನಿಮಾ ನೋಡಿದ ಮಾಜಿ ಸಿಎಂ ಸಿದ್ದರಾಮಯ್ಯ! ಫೋಟೋಗಳು ವೈರಲ್…

    ಪ್ರೇಮ್ ನಿರ್ದೇಶನದ ಏಕ್ ಲವ್ ಯಾಇಂದು ಫೆಬ್ರವರಿ.24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಹೌದು, ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್, ನಟ ರಾಣಾ ಹಾಗೂ ನಟಿ ರೀಷ್ಮಾ ನಾಣಯ್ಯ ಅಭಿನಯದ ಈ ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ವೈರಲ್ ಕೂಡಾ ಆಗಿವೆ.
    ಇನ್ನು, ಸಿನಿಮಾ ರಿಲೀಸ್ ಆಗುವ ಮುನ್ನವೇ ಗಣ್ಯರಿಗಾಗಿ ಫೆಬ್ರವರಿ.23 ರಂದು ಚಿತ್ರತಂಡ ಒಂದು ಪ್ರೀಮಿಯರ್ ಶೋ ನಡೆಸಿತು. ನಿರ್ದೇಶಕ ಪ್ರೇಮ್, ರಕ್ಷಿತಾ ಇಬ್ಬರೂ ರಾಜಕೀಯ ಮುಖಂಡರಿಗೆ, ಚಿತ್ರರಂಗದ ಗಣ್ಯರಿಗೆ ಸಿನಿಮಾದ ಪ್ರೀಮಿಯರ್ ಶೋಗೆ ಆಹ್ವಾನ ನೀಡಿದ್ದರು. ವಿಶೇಷ ಅಂದರೆ, ಪ್ರೇಮ್ ಅವರು ನೀಡಿದ ಆಹ್ವಾನದ ಮೇರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ‘ಏಕ್ ಲವ್ ಯಾ’ ಸಿನಿಮಾವನ್ನು ವೀಕ್ಷಿಸಿದ್ದಾರೆ.
    ಸಿದ್ದರಾಮಯ್ಯ ಜೊತೆ ರೇಣುಕಾಚಾರ್ಯ ಅವರು ಕೂಡಾ ಏಕ್ ಲವ್ ಯಾಸಿನಿಮಾ ವೀಕ್ಷಿಸಿದ್ದಾರೆ. ಪ್ರೇಮ್ ಆಹ್ವಾನದ ಮೇರೆಗೆ ಆಗಮಿಸಿದ್ದ ಸಿದ್ದರಾಮಯ್ಯ, ರೇಣುಕಾಚಾರ್ಯ ಅವರು ಬೇರೆ ಬೇರೆ ಗಣ್ಯರೊಂದಿಗೆ ಕೂತು ಏಕ್ ಲವ್ ಯಾಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಜತೆಗೆ, ಅವರು ಚಿತ್ರದ ನಟರ ಜತೆಗೆ ಕ್ಲಿಕಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗ ತೊಡಗಿವೆ

    'ಏಕ್ ಲವ್ ಯಾ' ಸಿನಿಮಾ ನೋಡಿದ ಮಾಜಿ ಸಿಎಂ ಸಿದ್ದರಾಮಯ್ಯ! ಫೋಟೋಗಳು ವೈರಲ್... 'ಏಕ್ ಲವ್ ಯಾ' ಸಿನಿಮಾ ನೋಡಿದ ಮಾಜಿ ಸಿಎಂ ಸಿದ್ದರಾಮಯ್ಯ! ಫೋಟೋಗಳು ವೈರಲ್...

    ಹೊಸ ಗೆಟಪ್​ನಲ್ಲಿ ವಿರಾಟ್-ಅನುಷ್ಕಾ! ಅಭಿಮಾನಿಗಳು ಹೇಳಿದ್ದೇನು? ಫೋಟೋಗಳು ವೈರಲ್…

    ‘ಭೀಮ್ಲಾ ನಾಯಕ್’ನಲ್ಲಿ ಸುದೀಪ್ ನಟಿಸದಿರುವುದು ಒಳ್ಳೇದಾಯ್ತು ಎಂದ ಅಭಿಮಾನಿಗಳು! ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts