ಕರೊನಾ ಕ್ಲಿಯರ್​ ಆದ್ರೆ ಮೊದಲು ಈ ಸ್ಥಳಕ್ಕೆ ಓಡೋಗ್ತಾರಂತೆ ‘ಕೆಜಿಎಫ್​’ ನಟಿ..

Raveena
Published on

ಬೇಸಿಗೆ ಶುರುವಾಗಿದೆ. ಎಲ್ಲವೂ ಸರಿಯಾಗಿಯೇ ನಡೆದಿದ್ದರೆ, ಇಷ್ಟೊತ್ತಿಗೆ ಬೀಚ್​ಗಳೆಲ್ಲ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆದರೆ, ಕರೊನಾ ಮಹಾಮಾರಿ ಆ ಸಂಭ್ರಮಕ್ಕೂ ರೇಖೆ ಎಳೆದಿದೆ. ಇಂಥ ಸಂದರ್ಭದಲ್ಲಿ ಬೀಚ್​ನಲ್ಲಿ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತ, ಹಳೇಯ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ ಕರೊನಾಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಅದರಲ್ಲೂ ಬಾಲಿವುಡ್​ ನಟಿ ರವೀನಾ ಟಂಡನ್​ ಸಹ ಸೂರ್ಯ ಮುತ್ತಿಕ್ಕಿದ ಆ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಕರೊನಾ ಕ್ಲಿಯರ್​ ಆದ್ರೆ ಮೊದಲು ಬೀಚ್​ನತ್ತ ಮುಖ ಮಾಡುತ್ತಾರಂತೆ ರವೀನಾ!

ಹೌದು, ಕಳೆದ ವರ್ಷದ ವಿಯೆಟ್ನಾಂ ಬೀಚ್​ನಲ್ಲಿ ಪತಿ ಅನಿಲ್​ ಥಡಾನಿ ಜತೆಗಿರುವ ಎರಡು ಫೋಟೋಗಳನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿರುವ ನಟಿ ರವೀನಾ, ಬೀಚ್​ ಡೇಸ್​ಗಳನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದಾರಂತೆ. ‘ಮತ್ತೆ ಸಮುದ್ರ ಕರೆಯುತ್ತಿದೆ. ಬೀಚ್​, ಸೂರ್ಯರಶ್ಮಿ, ಅಲೆಗಳು, ಮರಳು ಎಲ್ಲವೂ ನೆನಪಾಗುತ್ತಿದೆ' ಎಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ರಾಕಿಂಗ್​ ಸ್ಟಾರ್ ಯಶ್​ ನಾಯಕತ್ವದ ‘ಕೆಜಿಎಫ್​’ ಸಿನಿಮಾದಲ್ಲಿ ರಮಿಕಾ ಸೇನ್​ ಹೆಸರಿನ ಪಾತ್ರ ನಿಭಾಯಿಸಿರುವ ರವೀನಾ, ಈಗಾಗಲೇ ತಮ್ಮ ಪಾಲಿನ ಶೂಟಿಂಗ್​ ಮುಗಿಸಿದ್ದಾರೆ. ಇನ್ನುಳಿದಂತೆ ಹಲವು ಬಾಲಿವುಡ್ ಪ್ರಾಜೆಕ್ಟ್​ಗಳಲ್ಲೂ ರವೀನಾ ನಟಿಸಲಿದ್ದು, ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net