ಮುಂಬೈ: ಮಸ್ತು ಮಸ್ತು ಹುಡುಗಿ ಬಂದ್ಲು ಈ ಹಾಡಿಗೆ ಸ್ಟೆಪ್ಸ್ ಹಾಕಿರುವ ನಟಿ ರವೀನಾ ಟಂಡನ್ ಯಾರಿಗೆ ಗೊತ್ತಿಲ್ಲ ಹೇಳಿ. ಈ ನಟಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅಭಿಮಾನಿಗಳು ನನ್ನ ಜತೆ ಫೋಟೋ ತೆಗೆದುಕೊಳ್ಳಲು ಬಂದಾಗ ನನ್ನ ಈ ವರ್ತನೆ ತಪ್ಪಾಗಿದೆ ಎಂದು ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರವೀನಾ ಅವರು ಮಾಡಿರುವ ಪೋಸ್ಟ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನು ಓದಿ: ಟೈ ಖರೀದಿಸಲು ಸಾಧ್ಯವಿಲ್ಲ ಎಂಬಂತೆ ಅಮಿತಾಭ್ ಜತೆ ಅನುಚಿತ ವರ್ತನೆ; ಬಿಗ್ಬಿ ರಿಯಾಕ್ಷನ್ಗೆ ಅಂಗಡಿಯವನು ಶಾಕ್..
ರವೀನಾ ಟಂಡನ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಇತ್ತೀಚೆಗೆ ಅವರ ಲಂಡನ್ ಹೋಗಿದ್ದಾಗ ನಡೆದ ಘಟನೆ ಬಗ್ಗೆ ಸುದೀರ್ಘ ಟಿಪ್ಪಣಿಯೊಂದನ್ನು ಬರೆದಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಲಂಡನ್‌ಗೆ ಹೋಗಿದ್ದಾಗ ಕೆಲವರು ಫೋಟೋ ತೆಗೆದುಕೊಳ್ಳಲು ಭೇಟಿಯಾದರು. ನಾನು ಆ ಸಮಯದಲ್ಲಿ ಒಬ್ಬಂಟಿಯಾಗಿದ್ದೆ , ಭಯಗೊಂಡು ಅವರ ಪೋಟೋ ತೆಗೆದುಕೊಳ್ಳುವುದನ್ನು ನಿರಾಕರಿಸಿದೆ. ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಬರೆದಿದ್ದಾರೆ.
ಬಹುಶಃ ನಾನು ಅವರಿಗೆ ಫೋಟೋ ತೆಗೆದುಕೊಳ್ಳಲು ಅವಕಾಶ ನೀಡಬಹುದಿತ್ತು. ಅವರು ಒಳ್ಳೆಯ ಅಭಿಮಾನಿಗಳಾಗಿರಬಹುದು. ನಾನು ಲಂಡನ್ನಲ್ಲಿ ನಡೆದುಹೋಗುತ್ತದ್ದಾಗ ಈ ಘಟನೆ ನಡೆಯಿತು. ನಾನು ಆತಂಕದಿಂದ ನಾನಿದ್ದ ಸ್ಥಳದಿಂದ ಬೇಗನೆ ಹೊರಟುಹೋದೆ ಹಾಗೂ ಭದ್ರತಾ ಸಿಬ್ಬಂದಿಗೆ ಸಹಾಯ ಮಾಡುವಂತೆ ಕೇಳಿದೆ. ನನ್ನ ಈ ವರ್ತನೆಯು ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿರಬಹುದು. ಆದರೆ ಕೆಲವು ತಿಂಗಳ ಹಿಂದೆ ಬಾಂದ್ರಾದಲ್ಲಿ ನಡೆದ ಘಟನೆಯಿಂದ ಜನರು ನನ್ನನ್ನು ಭೇಟಿಯಾಗಲು ಬಂದರೆ ನಾನು ಉದ್ವೇಗಕ್ಕೆ ಒಳಗಾಗುತ್ತೇನೆ. ಆದ್ದರಿಂದ ಹಾಗೆ ನಡೆದುಕೊಂಡೆ ಎಂದು ತಿಳಿಸಿದ್ದಾರೆ.
ಈ ಘಟನೆಯ ನಂತರ ನನಗೆ ನಿಜವಾಗಿಯೂ ಬೇಸರವಾಗಿದೆ. ಈ ಪೋಸ್ಟ್ನ ಮೂಲಕ ನಾನು ಅವರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಿಮ್ಮ ಭಾವನೆಗೆ ಧಕ್ಕೆ ತರುವ ಅಥವಾ ನಿಮ್ಮ ಮನನೋಯಿಸುವ ಉದ್ದೇಶ ನನ್ನದಲ್ಲ. ನನ್ನನ್ನು ನಿಜವಾಗಿಯೂ ಕ್ಷಮಿಸಿ. ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಲು ಮತ್ತು ನಿಮ್ಮೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ. ಜನರು ನನ್ನನ್ನು ಭೇಟಿಯಾಗಲು ಬಂದಾಗ ಸಾಮಾನ್ಯವಾಗಿರಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕೆಲವು ತಿಂಗಳ ಹಿಂದೆ ರವೀನಾ ಅವರ ಚಾಲಕ ಕಟ್ಟಡದ ಆವರಣದಲ್ಲಿ ಕಾರು ನಿಲ್ಲಿಸುತ್ತಿದ್ದಾಗ ಬಾಂದ್ರಾದಲ್ಲಿರುವ ಅವರ ಮನೆಯ ಹೊರಗೆ ಗಲಾಟೆ ನಡೆದಿತ್ತು. ಚಾಲಕ ಕಾರನ್ನು ರಿವರ್ಸ್ ಮಾಡುತ್ತಿದ್ದಾಗ ಕಟ್ಟಡದ ಗೇಟ್ ಮುಂದೆ ಕುಟುಂಬವೊಂದು ಹಾದು ಹೋಗುತ್ತಿತ್ತು. ಕಾರು ತಮಗೆ ಡಿಕ್ಕಿ ಹೊಡೆಯುತ್ತದೆ ಎಂದು ಭಾವಿಸಿ ರವೀನಾ ಟಂಡನ್ ಅವರ ಚಾಲಕ ಹಾಗೂ ಕುಟುಂಬದ ಮೂವರು ಮಹಿಳೆಯರ ನಡುವೆ ಈ ವಿಚಾರವಾಗಿ ಜಗಳ ನಡೆದಿದೆ. ರವೀನಾ ತನ್ನ ಚಾಲಕ ಮತ್ತು ಮನೆಯವರ ನಡುವಿನ ವಾದವನ್ನು ಆಲಿಸಿದ ನಂತರ ಮನೆಯಿಂದ ಹೊರಬಂದರು. ಸಾಕಷ್ಟು ವಾದ-ವಿವಾದಗಳ ನಂತರ ಎರಡೂ ಕಡೆಯವರು ಸ್ಥಳದಿಂದ ಹೊರಟು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಈ ಬಾರಿಯ ಬಿಗ್ಬಾಸ್ ಸೀಸನ್ನ ಅತ್ಯಂತ ದುಬಾರಿ ಸ್ಪರ್ಧಿ ಇವರೇ ನೋಡಿ..; ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?