ಮುಂಬೈ: ಬಿಗ್ಬಾಸ್ 18 ಶುರುವಾಗಲು ಇನ್ನು ಕೆಲವೇ ವಾರಗಳು ಬಾಕಿ ಇದೆ. ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿಬರುವ ಈ ರಿಯಾಲಿಟಿ ಶೋ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಸೆಲೆಬ್ರಿಟಿ ಸ್ಪರ್ಧಿಗಳ ಹೆಸರು ಕೂಡ ಹೊರ ಬರಲಾರಂಭಿಸಿದೆ. ಈ ಬಾರಿ ಸಲ್ಮಾನ್ ಖಾನ್ ಅವರ ಶೋನಲ್ಲಿ ಯಾರು ಪಾಲ್ಗೊಳ್ಳುತ್ತಾರೆ. ಈ ಬಾರಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಬಗ್ಗೆ ಮೂಲಗಳು ತಿಳಿಸಿವೆ.
ಇದನ್ನು ಓದಿ: ಟೈ ಖರೀದಿಸಲು ಸಾಧ್ಯವಿಲ್ಲ ಎಂಬಂತೆ ಅಮಿತಾಭ್ ಜತೆ ಅನುಚಿತ ವರ್ತನೆ; ಬಿಗ್ಬಿ ರಿಯಾಕ್ಷನ್ಗೆ ಅಂಗಡಿಯವನು ಶಾಕ್..
ಕಾರ್ಯಕ್ರಮದ ಆಯೋಜಕರು ಇತ್ತೀಚೆಗೆ ಧೀರಜ್ ಧೂಪರ್ ಅವರನ್ನು ಸಂಪರ್ಕಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಯುತ್ತಿದ್ದು, ಅವರು ಬಿಗ್ಬಾಸ್ ಸೀಸನ್ 18ರಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಗ್ ಬಾಸ್ ಸೀಸನ್ 18′ ರ ಭಾಗವಾಗಲು ಉತ್ಸುಕರಾಗಿದ್ದಾರೆ. ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.
ಧೀರಜ್ ಧೂಪರ್ ಅವರನ್ನು ಈ ಹಿಂದಿನ ಹಲವು ಸೀಸನ್ಗಳಲ್ಲಿ ಭಾಗವಹಿಸುವಂತೆ ಸಂಪರ್ಕಿಸಲಾಗಿತ್ತು, ಆದರೆ ಈ ಬಾರಿ ಅವರು ಬಿಗ್ಬಾಸ್ 18ಕ್ಕೆ ಬರಲು ಆಸಕ್ತಿ ಹೊಂದಿದ್ದಾರೆ. ಸದ್ಯಕ್ಕೆ ಅವರಿಗೆ ನೀಡಲಿರುವ ಸಂಭಾವನೆ ವಿಚಾರ ಆಸಕ್ತಿದಾಯಕ ವಿಷಯವಾಗಿದೆ. ಧೀರಜ್ ಧೂಪರ್ ಅವರಿಗೆ ಈ ಸೀಸನ್ನಲ್ಲಿ ಪಾಲ್ಗೊಳ್ಳುವಂತೆ ಸಹಿ ಹಾಕಲು ಆಯೋಜಕರು 4 ರಿಂದ 5 ಕೋಟಿ ರೂಪಾಯಿ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಒಪ್ಪಂದ ಫೈನಲ್ ಆದ್ರೆ ಧೀರಜ್ ಧೂಪರ್ ಬಿಗ್ಬಾಸ್ 18ರ ಅತ್ಯಂತ ದುಬಾರಿ ಸ್ಪರ್ಧಿಯಾಗಲಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಸೀಸನ್ 18ರ ಸ್ಪರ್ಧಿಗಳ ಪಟ್ಟಿಯಲ್ಲಿ ಝಾನ್ ಖಾನ್, ಮೀರಾ ಡಿಯೋಸ್ಥಲೆ, ಸುರಭಿ ಜ್ಯೋತಿ, ಕನಿಕಾ ಮಾನ್, ಶಾಹೀರ್ ಶೇಖ್, ಸಮೀರಾ ರೆಡ್ಡಿ, ದೀಪಿಕಾ ಆರ್ಯ, ಸೋಮಿ ಅಲಿ, ಅಂಜಲಿ ಆನಂದ್, ಅರ್ಜುನ್ ಬಿಜಲಾನಿ, ಮಾನ್ಸಿ ಶ್ರೀವಾಸ್ತವ ಮತ್ತು ಸೇರಿದಂತೆ ಹಲವಿ ಸೆಲಿಬ್ರಿಟಿಗಳ ಹೆಸರಿರುವುದಾಗಿ ತಿಳಿದುಬಂದಿದೆ. ಯಾರೆಲ್ಲಾ ಬಿಗ್ಬಾಸ್ ಮನೆಗೆ ಬರಲಿದ್ದಾರೆ ಎಂದು ಕಾದುನೋಡಬೇಕಿದೆ. (ಏಜೆನ್ಸೀಸ್)
ದರ್ಶನ್ ಬೆರಳ ಸನ್ನೆ ಹಿಂದಿರುವ ಸೀಕ್ರೆಟ್ ಇದೇನಾ?; ಫ್ಯಾನ್ಸ್ ಹೇಳ್ತಿರುವ ವಿಷಯ ಹೀಗಿದೆ ನೋಡಿ..