ಪಡಿತರ ವಿತರಕರ ಸಮಿತಿ ಧರಣಿ

New Project (12)
Published on

ಕಾಸರಗೋಡು: ಪಡಿತರ ವಿತರಕರ ಜಂಟಿ ಸಮನ್ವಯ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ತಾಲೂಕು ಸರಬರಾಜು ಕಚೇರಿ ಎದುರು ಸಾಮೂಹಿಕ ಧರಣಿ ಸತ್ಯಾಗ್ರಹ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

6 ವರ್ಷಗಳ ಹಿಂದೆ ಜಾರಿಗೆ ತಂದ ವೇತನ ಪ್ಯಾಕೇಜ್ ಪರಿಷ್ಕರಿಸಬೇಕು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಮಿಷನ್ ಮೊತ್ತ ವಿತರಿಸಬೇಕು. ಓಣಂ ಸಂದರ್ಭ ಸರ್ಕಾರ ಘೋಷಿಸಿರುವ 1000 ರೂ. ಉತ್ಸವ ಭತ್ಯೆ ನೀಡಬೇಕು. ಪ್ರತಿ ತಿಂಗಳು ಪಡಿತರ ಸಾಮಗ್ರಿಗಳನ್ನು ಅಂಗಡಿಗಳಿಗೆ ಸಕಾಲದಲ್ಲಿ ತಲುಪಿಸಬೇಕು. ಕೆಟಿಪಿಡಿಎಸ್ ಕಾಯ್ದೆಯನ್ನು ಪರಿಷ್ಕರಿಸಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಿ ಪಡಿತರ ವಿತರಕರ ಸಂಘ ಧರಣಿ ಆಯೋಜಿಸಿತ್ತು.

ಧರಣಿಯನ್ನು ಎಕೆಆರ್‌ಆರ್‌ಡಿಎ ಜಿಲ್ಲಾಧ್ಯಕ್ಷ ಶಂಕರ ಬೆಳ್ಳಿಗೆ ಉದ್ಘಾಟಿಸಿದರು. ಎಕೆಆರ್‌ಆರ್‌ಡಿಎ ತಾಲೂಕು ಅಧ್ಯಕ್ಷ ಸತೀಶನ್ ಇಡವೇಲಿ ಅಧ್ಯಕ್ಷತೆ ವಹಿಸಿದ್ದರು. ಸಂಯುಕ್ತ ಸಮರ ಸಮಿತಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಬಲ್ಲಾಳ್, ಟಿ.ವಿಜಯನ್ ನಾಯರ್, ಕೆ.ಪ್ರದೀಪ್ ಕುಮಾರ್, ಸುಧಾಮ ಗೋಸಾಡ, ವಸಂತ ಶೆಣೈ, ನಾರಾಯಣನ್ ಕೋಳಿಯಡುಕ್ಕಂ, ಇ.ಕೆ.ಅಬ್ದುಲ್ಲಾ, ಶೋಭನಾ ವಿಜಯನ್ ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ಪಿ.ಅಬ್ದುಲ್ ಗಫೂರ್ ಸ್ವಾಗತಿಸಿದರು. ಪಿ.ಲೋಹಿತಾಕ್ಷನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net