More

  ಕಾಲೆಳೆದ ಟ್ರೊಲ್ಲರ್ಸ್​​ಗೆ ತಿರುಗೇಟು ಕೊಟ್ಟ ಕೂರ್ಗ್​ ಬೆಡಗಿ!: ಹುಟ್ಟು ಹಬ್ಬದಂದೇ ರಶ್ಮಿಕಾಗೆ ಸಿಟ್ಟು ಬಂದಿದ್ದೇಕೆ?

  ಹೈದರಾಬಾದ್​: ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರ ಗೆಲುವಿನ ಖುಷಿಯಲ್ಲಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇದೇ ಖುಷಿಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಆತ್ಮೀಯ ಸ್ನೇಹಿತ ವಿಜಯ್​ ಜೊತೆಗೂಡಿ ವಿದೇಶದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

  ಇದನ್ನೂ ಓದಿ: ರಾಜಸ್ಥಾನ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಬೋರ್ಡ್​ ಪರೀಕ್ಷೆ ಬರೆಯಲು ನಿರಾಕರಿಸಿದ ಶಾಲೆ

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಶ್ಮಿಕಾ ಅಬುಧಾಬಿಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರ ಬರ್ತಡೆ ಪಾರ್ಟಿ ಯುಎಸ್‍ಎಗೆ ಶಿಫ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳ ರಶ್ಮಿಕಾ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣಗೆ ಡಿಮ್ಯಾಂಡ್ ಕೂಡ ಹೆಚ್ಚಿದೆ. ಆಗಾಗ ತನ್ನ ಮಾತುಗಳಿಂದಲೇ ವಿವಾದದಿಂದಲೂ ರಶ್ಮಿಕಾ ಸದ್ದು ಮಾಡುತ್ತಿರುತ್ತಾರೆ.

  ಕಾಲೆಳೆದ ಟ್ರೊಲ್ಲರ್ಸ್​​ಗೆ ತಿರುಗೇಟು ಕೊಟ್ಟ ಕೂರ್ಗ್​ ಬೆಡಗಿ!: ಹುಟ್ಟು ಹಬ್ಬದಂದೇ ರಶ್ಮಿಕಾಗೆ ಸಿಟ್ಟು ಬಂದಿದ್ದೇಕೆ?

  ಸಂದೀಪ್ ವಂಗಾ ನಿರ್ದೇಶನದ ರಣಬೀರ್ ಕಪೂರ್-ರಶಿಮಿಕಾ ಅಭಿನಯದ ‘ಪ್ರಾಣಿ’ (ಅಮ್ಮುಲ್). ಈ ಚಿತ್ರವು ವಿಭಿನ್ನ ಕಥೆಯನ್ನು ಹೊಂದಿರುವ ಆಕ್ಷನ್ ಥ್ರಿಲ್ಲರ್ ಆಗಿದೆ. ಸಿನಿಮಾ ಸೂಪರ್ ಹಿಟ್ ಆಗಿದೆ. ಇದರ ನಡುವೆ ಟ್ರೋಲ್ ಮಾಡಿದ್ದಾರೆ.

  ಕಳೆದ ನಾಲ್ಕು ತಿಂಗಳಿಂದ ಟ್ರೋಲ್​ ಗಳಿಗೆ ಉತ್ತರಿಸಿದ ಕೂರ್ಗ್​ ಬೆಡಗಿ ಇದೀಗ ಮೌನ ಮುರಿದಿದ್ದಾರೆ. ನೇಹಾ ಧೂಪಿಯಾ ಕಾರ್ಯಕ್ರಮದಲ್ಲಿ ಮಾತಾಡಿದ ರಶ್ಮಿಕಾ, ‘ದೇಹದ ವಿಚಾರದಲ್ಲಿ ಮಹಿಳೆಯರನ್ನು ಜನರು ಟ್ರೋಲ್ ಮಾಡೋದು ನನಗೆ ಇಷ್ಟವಾಗುವುದಿಲ್ಲ. ನಾನು ಅವರನ್ನು ದ್ವೇಷಿಸುತ್ತೇನೆ. ಸಿನಿಮಾದ ಡೈಲಾಗ್ ಹಾಗೂ ನನ್ನ ಮುಖದ ರಿಯಾಕ್ಷನ್​ ವಿಚಾರವಾಗಿ ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ನಾನು ಹೇಗೆ ನಟಿಸಿದ್ದೇನೆ ಅನ್ನೋದು ನನಗೆ ಚೆನ್ನಾಗಿ ಗೊತ್ತು ಎಂದು ರಶ್ಮಿಕಾ ತಿರುಗೇಟು ನೀಡಿದ್ದಾರೆ.

  ಕಾಲೆಳೆದ ಟ್ರೊಲ್ಲರ್ಸ್​​ಗೆ ತಿರುಗೇಟು ಕೊಟ್ಟ ಕೂರ್ಗ್​ ಬೆಡಗಿ!: ಹುಟ್ಟು ಹಬ್ಬದಂದೇ ರಶ್ಮಿಕಾಗೆ ಸಿಟ್ಟು ಬಂದಿದ್ದೇಕೆ?

  ಕರ್ವಾಚೌಟ್ ದೃಶ್ಯ ಸಿನಿಮಾದ ಹೈಲೈಟ್ ಆಗಿದ್ದು, ಆ ಸೀನ್ ನಲ್ಲಿ ತುಂಬಾ ಕಷ್ಟಪಟ್ಟಿದ್ದೇನೆ. ಆ ಒಂದು ದೃಶ್ಯದಲ್ಲಿ ಹಲವು ರೀತಿಯ ಭಾವನೆಗಳು ವ್ಯಕ್ತವಾಗಬೇಕು. ಅದರಲ್ಲಿ ನನ್ನ ಅಭಿನಯ ನೋಡಿ ಇಡೀ ಸೆಟ್ ಚಪ್ಪಾಳೆ ತಟ್ಟಿತು. ಥಿಯೇಟರ್ ನಲ್ಲೂ ಅದೇ ಪ್ರತಿಕ್ರಿಯೆ ಸಿಕ್ಕಿದೆ. ವಿಚಿತ್ರವೆಂದರೆ ಹಲವು ಮಂದಿಗೆ ಇಷ್ಟವಾಗಿದ್ದ ಆ ದೃಶ್ಯವನ್ನು ಕೆಲವರು ಟೀಕಿಸಿದ್ದರು. 9 ನಿಮಿಷದ ದೃಶ್ಯದಲ್ಲಿ 10 ಸೆಕೆಂಡ್ ಡೈಲಾಗ್ ಚೆನ್ನಾಗಿಲ್ಲ ಅಂತ ಲೇವಡಿ ಮಾಡಿದರು. ನಾನು ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬರೂ ಅವರವರ ಅಭಿರುಚಿಗೆ ತಕ್ಕಂತೆ ಎಲ್ಲವನ್ನೂ ಇಷ್ಟಪಡಬೇಕು ಎಂಬ ನಿಯಮವಿಲ್ಲ’ ಎಂದು ಟ್ರೂಲ್ ಮಾಡೋರಿಗೆ ಸ್ಟ್ರಾಂಗ್ ಕೌಂಟರ್ ನೀಡಿದ್ದಾರೆ.

  ಕಾಲೆಳೆದ ಟ್ರೊಲ್ಲರ್ಸ್​​ಗೆ ತಿರುಗೇಟು ಕೊಟ್ಟ ಕೂರ್ಗ್​ ಬೆಡಗಿ!: ಹುಟ್ಟು ಹಬ್ಬದಂದೇ ರಶ್ಮಿಕಾಗೆ ಸಿಟ್ಟು ಬಂದಿದ್ದೇಕೆ?

  ಇದೇ ದೃಶ್ಯದ ಬಗ್ಗೆ ನಿರ್ದೇಶಕ ಸಂದೀಪ್ ವಂಗ ಕೂಡ ಮಾತನಾಡಿದ್ದು, ನ್ಯಾಷನಲ್ ಕ್ರಶ್​ ರಶ್ಮಿಕಾ ನಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾಡಿದ್ದಾರೆ.

  ರಶ್ಮಿಕಾ ಮಂದಣ್ಣ ಅವರು ಸದ್ಯ ‘ಪುಷ್ಪ 2’, ‘ರೇನ್​ಬೋ’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಧನುಷ್ ನಟನೆಯ ‘ಕುಬೇರ’ ಚಿತ್ರಕ್ಕೆ ಅವರು ನಾಯಕಿ. ವಿಕ್ಕಿ ಕೌಶಲ್ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಪ್ರತಿ ಸಿನಿಮಾಗಳು ಬೇರೆ ಬೇರೆ ರೀತಿಯಲ್ಲಿವೆ.

  ಸಿಎಂ ಇಬ್ರಾಹಿಂ ಪುತ್ರ ಫೈಜ್ ಕಾಂಗ್ರೆಸ್ ಸೇರ್ಪಡೆ! ನೆಕ್ಸ್ಟ್ ತಂದೆಯ ಸರದಿ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts