More

  ರಾಜಸ್ಥಾನ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಬೋರ್ಡ್​ ಪರೀಕ್ಷೆ ಬರೆಯಲು ನಿರಾಕರಿಸಿದ ಶಾಲೆ

  ಅಜ್ಮೀರ್: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಕಾರಣ ಶಾಲೆಯ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಿಲ್ಲ ಎಂದು ರಾಜಸ್ಥಾನದ 12ನೇ ತರಗತಿ ವಿದ್ಯಾರ್ಥಿನಿ ಆರೋಪ ಮಾಡಿದ್ದಾಳೆ.

  ಇದನ್ನೂ ಓದಿ: ಸಿಎಂ ಇಬ್ರಾಹಿಂ ಪುತ್ರ ಫೈಜ್ ಕಾಂಗ್ರೆಸ್ ಸೇರ್ಪಡೆ! ನೆಕ್ಸ್ಟ್ ತಂದೆಯ ಸರದಿ?

  ಕಳೆದ ವರ್ಷ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಕಾರಣದಿಂದ ನಾಲ್ಕು ತಿಂಗಳು ತರಗತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಾಲೆಯು ಬೋರ್ಡ್ ಪರೀಕ್ಷೆಗೆ ಹಾಜರಾಗಲು ಬಿಡಲಿಲ್ಲ. ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ನೀಡಲಿಲ್ಲ ಎಂದು ಅಜ್ಮೀರ್‌ನ ಖಾಸಗಿ ಶಾಲೆಯ ವಿದ್ಯಾರ್ಥಿನಿ ತಿಳಿಸಿದ್ದಾರೆ.

  r

  ಪರೀಕ್ಷೆಗೆ ಹಾಜರಾದರೆ ವಾತಾವರಣ ಹಾಳಾಗುತ್ತದೆ ಎಂದು ಶಾಲಾ ಅಧಿಕಾರಿಗಳು ಹೇಳಿದ್ದರು ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ.
  ಆದರೆ ವಿಧ್ಯಾರ್ಥನಿ ಕಳೆದ ನಾಲ್ಕು ತಿಂಗಳಿನಿಂದ ತರಗತಿಗಳಿಗೆ ಹಾಜರಾಗದ ಕಾರಣ ಆ ವಿದ್ಯಾರ್ಥಿನಿಗೆ ಪ್ರವೇಶ ಪತ್ರವಲ್ಲ ನೀಡಿಲ್ಲ ಎಂದು ಅಜ್ಮೀರ್​ನ ಖಾಸಗಿ ಶಾಲೆ ಸಮಜಾಯಿಷಿ ನೀಡಿದೆ.

  ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಿದೆ

  ಈ ಕುರಿತು ವಿದ್ಯಾರ್ಥಿನಿ ಬೇರೆ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅವರು ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಸಲಹೆ ನೀಡಿದ್ದಾರೆ. ಅಜ್ಮೀರ್‌ನ ಮಕ್ಕಳ ಕಲ್ಯಾಣ ಆಯೋಗ (ಸಿಡಬ್ಲ್ಯೂಸಿ) ಪ್ರಕರಣ ದಾಖಲಿಸಿದ್ದು, ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಿದೆ.ಇಡೀ ಘಟನೆಯ ಬಗ್ಗೆ ವಿದ್ಯಾರ್ಥಿಯೊಂದಿಗೆ ಮಾತನಾಡಿದ್ದೇನೆ ಎಂದ ಸಿಡಬ್ಲ್ಯೂಸಿ ಅಧ್ಯಕ್ಷೆ ಅಂಜಲಿ ಶರ್ಮಾ. ತನಿಖೆ ನಡೆಯುತ್ತಿದೆ ಎಂದರು. ಮಾರ್ಚ್‌ನಲ್ಲಿ ನಡೆದ ಪರೀಕ್ಷೆಗಳನ್ನು ತಪ್ಪಿಸಿಕೊಂಡ ಕಾರಣದಿಂದ ಮತ್ತೆ ಎಕ್ಸಾಂ ಬರೆಯುವುದು ವಿದ್ಯಾರ್ಥಿನಿ ಹಕ್ಕು. ಇದನ್ನು ತಡೆಯುವುದು ಅಪರಾಧ ಎಂದು ಹೇಳಿದರು.

  ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪ ಮತ್ತು ಇತರ ಇಬ್ಬರು ಪುರುಷರು ಅತ್ಯಾಚಾರ ಮಾಡಿದ್ದರು. ಅವಳು ಶಾಲೆಗೆ ಬರುವುದರಿಂದ “ವಾತಾವರಣವನ್ನು ಹಾಳುಮಾಡಬಹುದು” ಎಂದು ಶಾಲೆಯವರು ಮನೆಯಿಂದಲೇ ಓದುವಂತೆ ಸೂಚಿಸಿದ್ದಾರೆ ಎಂದು ಅವರು ಅಂಜಲಿ ಶರ್ಮಾಗೆ ತಿಳಿಸಿದರು. ವಿದ್ಯಾರ್ಥಿನಿ ಒಪ್ಪಿಕೊಂಡು ಮನೆಯಲ್ಲಿ ತನ್ನ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು ಎನ್ನಲಾಗಿದೆ.

  ಆಕೆ ತನ್ನ ಪ್ರವೇಶ ಪತ್ರವನ್ನು ಪಡೆಯಲು ಹೋದಾಗ, ಅಧಿಕಾರಿಗಳು ಆಕೆ ಇನ್ನು ಮುಂದೆ ಶಾಲೆಯ ವಿದ್ಯಾರ್ಥಿಯಲ್ಲ ಎಂದು ಹೇಳಿದ್ದಾರೆ. ಆಕೆಯ ಅತ್ಯಾಚಾರದ ನಂತರ ಇತರ ವಿದ್ಯಾರ್ಥಿಗಳ ಪೋಷಕರು ಆಕೆಯ ಉಪಸ್ಥಿತಿಯನ್ನು ವಿರೋಧಿಸಿದ್ದರಿಂದ ಶಾಲೆಯು ತನ್ನನ್ನು ಪ್ರವೇಶಿಸದಂತೆ ನಿರ್ಬಂಧಿಸಿದೆ ಎಂದು ವಿದ್ಯಾರ್ಥಿನಿ ತನ್ನ ಅಳಲು ತೋಡಿಕೊಂಡಿದ್ದಾಳೆ.

  ಶೈಕ್ಷಣಿಕವಾಗಿ ಉತ್ತಮ ಅಂಕ ಗಳಿಸುತ್ತಿದ್ದ ವಿದ್ಯಾರ್ಥಿನಿ ಈ ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದಾಳೆ. ಅವಳು 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇ. 79 ಅಂಕಗಳಿಸಿದ್ದಳು. ಅವಳು 12 ನೇ ಬೋರ್ಡ್‌ ಪರೀಕ್ಷೆ ಉತ್ತಮವಾಗಿ ಬರೆಯುತ್ತಿದ್ದಳು. ಆದರೆ ಶಾಲೆಯ ನಿರ್ಲಕ್ಷ್ಯದಿಂದಾಗಿ ಅವಳು ಒಂದು ವರ್ಷ ಕಳೆದುಕೊಳ್ಳುವಂತಾಗಿದೆ ಎಂದು ಅಂಜಲಿ ಶರ್ಮಾ ಅಭಿಪ್ರಾಯಪಟ್ಟಿದ್ದಾಳೆ.

  IPL 2024: ರೋಹಿತ್ ಶರ್ಮಾ ವಿಕೆಟ್​ಗೆ​ ಸಂಭ್ರಮಿಸಿದ್ದ ಸಿಎಸ್​ಕೆ ಅಭಿಮಾನಿಯನ್ನು ಕೊಲೆಗೈದ MI ಫ್ಯಾನ್ಸ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts