ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ; ಈ ದಿನದಂದು ಅಧಿಕೃತ ಘೋಷಣೆ

Untitled design - 2023-10-21T211845.653
Published on

ಮುಂಬೈ: ನ್ಯಾಷನಲ್​ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ ಸದ್ಯ ಮಹಿಳಾ ಪ್ರಧಾನ ಪ್ರಾಜೆಕ್ಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಈ ಹಿಂದೆ ಸಿನಿ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಇದು ಯಾವ ಸಿನಿಮಾ, ಯಾರ ನಿರ್ದೇಶನ ಎಂಬ ಸಂಗತಿ ಹೀಗಿದೆ.

ಟಾಲಿವುಡ್​, ಬಾಲಿವುಡ್​ ಸಿನಿಮಾಗಳಲ್ಲಿ ನಿರತರಾಗಿರುವ ರಶ್ಮಿಕಾ, ಇದೀಗ ಮಹಿಳಾ ಪ್ರಧಾನ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಈ ಬಗ್ಗೆ ಭಾನುವಾರ (ಅ.22) ಅಧಿಕೃತ ಘೋಷಣೆಯನ್ನು ಪ್ರಕಟಿಸಲಾಗುವುದು ಎಂದು ಚಿತ್ರತಂಡ ಪೋಸ್ಟರ್​ ಪ್ರಕಟಿಸುವ ಮುಖೇನ ತಿಳಿಸಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್, ಭಾನುವಾರ ಬೆಳಿಗ್ಗೆ 11:07ಕ್ಕೆ ಘೋಷಿಸಲಿದೆ. ಈ ಚಿತ್ರವು ಪ್ರೊಡಕ್ಷನ್​ನ 51ನೇ ಚಿತ್ರವಾಗಿದೆ.

ಈ ಸಿನಿಮಾವನ್ನು ನಟ, ನಿರ್ಮಾಪಕ ರಾಹುಲ್ ರವೀಂದ್ರನ್ ನಿರ್ದೇಶಿದಲಿದ್ದು, ಗೀತಾ ಆರ್ಟ್ಸ್​​ನ ಧೀರಜ್ ಮೊಗಿಲಿನೇನಿ ಎಂಟರ್ಟೈನ್ಮೆಂಟ್ಸ್ ಮತ್ತು ಮಾಸ್ ಮೂವಿ ಮೇಕರ್ಸ್ ಬ್ಯಾನರ್​ನಡಿ ಜಂಟಿಯಾಗಿ ನಿರ್ಮಿಸಲಾಗುತ್ತಿದೆ. ಚಿತ್ರದ ಬಗ್ಗೆ ರಶ್ಮಿಕಾ ಫ್ಯಾನ್ಸ್​ ತೀವ್ರ ಕಾತರ ವ್ಯಕ್ತಪಡಿಸಿದ್ದು, ಅಧಿಕೃತ ಘೋಷಣೆಗಾಗಿ ಎದುರು ನೋಡುತ್ತಿದ್ದಾರೆ.

ಅಲ್ಲು ಅರ್ಜುನ್‌ ಅಭಿನಯದ 'ಪುಷ್ಪ 2' ಹಾಗೂ ರಣಬೀರ್​ ಕಪೂರ್​ ನಟನೆಯ 'ಅನಿಮಲ್'​ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸಿನಿಮಾಗಳು ಸದ್ಯ ಬಿಡುಗಡೆಗೆ ಸಜ್ಜಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net