ಈ ಹಿಂದೆ ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗ, 'ಪುಷ್ಪ' ಚಿತ್ರದ ತೆಲುಗಿನ ಭಾಷೆಯಲ್ಲಿ ನಟಿ ರಶ್ಮಿಕಾ ಅವರೆ ಡಬ್ಬಿಂಗ್ ನೀಡಿದ್ದು ಕಂಡುಬಂದಿದೆ. ಆದರೆ, 'ಪುಷ್ಪ' ಸಿನಿಮಾದ ಕನ್ನಡ ಅವತರಣೆಕೆಗೆ ರಶ್ಮಿಕಾ ಡಬ್ಬಿಂಗ್ ನೀಡಿಲ್ಲ. ಇದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಕನ್ನಡದಲ್ಲಿ ಡಬ್ಬಿಂಗ್ ನೀಡದಕ್ಕೆ ಕಾರಣ ಇವತ್ತು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ ರಶ್ಮಿಕಾ. ಸಮಯದ ಆಭಾವದಿಂದ ಚಿತ್ರದ ಕನ್ನಡ ಅವತರಣೆಕೆಗೆ ಡಬ್ಬಿಂಗ್ ನೀಡಲು ಆಗಿಲ್ಲ ಎಂದು ಹೇಳಿದ್ದಾರೆ ನ್ಯಾಷನಲ್ ಕ್ರಶ್. 'ಪುಷ್ಪ' ಚಿತ್ರ 2 ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗ ''ಪುಷ್ಪ: ದಿ ರೈಸ್'' ಡಿ. 17ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಸಿನಿಮಾ ಬಿಡುಗಡೆಯ ಕೊನೆಯ ಹಂತದವರೆಗೂ ಪ್ರಚಾರದಲ್ಲಿ ತೊಡಗಿಕೊಂಡಿದೆ.