ಬೆಂಗಳೂರಿಗೆ 'ಪುಷ್ಪ' ಚಿತ್ರತಂಡದ ಸಮೇತ ಬಂದ ನಟಿ ರಶ್ಮಿಕಾ ಮಂದಣ್ಣ, ಸಿನಿಮಾದ ಪತ್ರಿಕಾಗೋಷ್ಠಿ ನಡೆಯುವ ಸ್ಥಳದಲ್ಲಿ ನಟ ಡಾಲಿ ಧನಂಜಯ್ ಅವರನ್ನು ನೋಡಿದ ಕೂಡಲೆ ಓಡೋಡಿ ಹೋಗಿ ತಬ್ಬಿಕೊಂಡಿದ್ದಾರೆ. ನಟ ಡಾಲಿ ಧನಂಜಯ್ ಅವರನ್ನು ರಶ್ಮಿಕಾ ತಬ್ಬಿಕೊಂಡ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಡಾಲಿ ಅವರು ಜಾಲಿ ರೆಡ್ಡಿ ಪಾತ್ರದಲ್ಲಿ ಆಕ್ಷನ್ ಡ್ರಾಮಾ ಆದ ''ಪುಷ್ಪ: ದಿ ರೈಸ್''ನಲ್ಲಿ ಪ್ರಮುಖ ನಟರ ಹೊರತಾಗಿ ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್, ಹರೀಶ್ ಉತ್ತಮನ್, ಸುನಿಲ್, ರಾವ್ ರಮೇಶ್, ಡಾಲಿ ಧನಂಜಯ್ ಮತ್ತು ಅಜಯ್ ಘೋಷ್ ಸಹ ಕೆಲವು ಪಾತ್ರಗಳಲ್ಲಿ ಮಿಂಚಲಿದ್ದಾರೆ. ಸಿನಿಮಾಗೆ ಸುಕುಮಾರ್ ನಿರ್ದೇಶಕರಾಗಿದ್ದು, ಡಿವಿವಿ ದಾನಯ್ಯ ಅವರು ನಿರ್ಮಾಪಕರಾಗಿದ್ದಾರೆ.