ಹೊಸ ವರ್ಷ ಸ್ವಾಗತಿಸಲು ಗೋವಾಗೆ ಹೋದ ರಶ್ಮಿಕಾ, ವಿಜಯ್ ದೇವರಕೊಂಡ...

Published on
ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಹಾರ್ಟ್‌ಥ್ರೋಬ್ ನಟ ವಿಜಯ್ ದೇವರಕೊಂಡ ಪ್ರಸ್ತುತ ಸಿನಿಮಾಗಳ ಕೆಲಸಗಳಿಂದ ವಿರಾಮ ಪಡೆದಿದ್ದಾರೆ. ಇನ್ನು, ಮೂಲಗಳ ಪ್ರಕಾರ, ಸದ್ಯ ಇವರಿಬ್ಬರು ಗೋವಾ ವಿಹಾರದಲ್ಲಿದ್ದು, ಹೊಸ ವರ್ಷವನ್ನು ಒಟ್ಟಿಗೆ ಸ್ವಾಗತಿಸಲಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿವೆ. ಜೊತೆಗೆ, ನಟಿ ಮತ್ತು ನಟ ಇಬ್ಬರೂ ಈ ಸುದ್ದಿಗಳನ್ನು ನಿರಾಕರಿಸಿಲ್ಲ. 
ಹೌದು, 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಎಂಬ ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ ಇವರಿಬ್ಬರು. ಇತ್ತೀಚೆಗೆ, ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮುಂಬೈನ ಹೋಟೆಲ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಟ ಮತ್ತು ನಟಿ ಆಗಾಗ್ಗೆ ಮುಂಬೈನಲ್ಲಿ ಭೇಟಿಯಾಗುತ್ತಾರೆ ಮತ್ತು ಹೈದರಾಬಾದ್‌ನಲ್ಲೂ ಒಂದೇ ಜಿಮ್‌ಗೆ ಹೋಗುತ್ತಾರೆ ಎಂಬ ಸುದ್ದಿಗಳು ಕೇಳಿಬಂದಿವೆ. ಗೋವಾಗೆ ಹೋಗುವ ಮುಂಚೆ ಇಬ್ಬರೂ ಒಟ್ಟಿಗೆ ಮುಂಬೈನ ಒಂದು ಜಿಮ್​ನಲ್ಲಿ ಮಾದ್ಯಮಗಳ ಕ್ಯಾಮೆರಾಗಳಿಗೆ ಕಾಣಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net