Rashmika Mandanna : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ “ಪುಷ್ಪ-2 : ದಿ ರೂಲ್” ಸಿನಿಮಾದ ಬಿಡುಗಡೆ ದಿನ ಸಮೀಪಿಸುತ್ತಿದೆ. ಇನ್ನು ನಾಲ್ಕೇ ದಿನಗಳಲ್ಲಿ ಬೆಳ್ಳಿತೆರೆಯ ಮೇಲೆ ಪುಷ್ಪ ರಾರಾಜಿಸಲಿದ್ದಾನೆ. ಬಿಗ್ ಬಜೆಟ್ನಲ್ಲಿ ತಯಾರಾಗಿರುವ ಪುಷ್ಪ ಸಿನಿಮಾವನ್ನು ವೀಕ್ಷಿಸಲು ಸಿನಿರಸಿಕರು ಕಾಯುತ್ತಿದ್ದಾರೆ. ಅದರಲ್ಲೂ ಕನ್ನಡತಿ ರಶ್ಮಿಕಾ ಮಂದಣ್ಣರನ್ನು ದೊಡ್ಡ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ತಾಜಾ ಸಂಗತಿ ಏನೆಂದರೆ, ರಶ್ಮಿಕಾ ಮಂದಣ್ಣ ಅವರು ತನ್ನ ಸಮಕಾಲೀನ ನಟಿಯರನ್ನು ಮೀರಿಸಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದಾರೆ ಎಂದು ಕೆಲವು ವದಂತಿಗಳು ಹರಿದಾಡುತ್ತಿವೆ. ಆದರೆ, ಈ ವದಂತಿಗಳಿಗೆ ರಶ್ಮಿಕಾ ಇತ್ತೀಚೆಗಷ್ಟೇ ತೆರೆಎಳೆದಿದ್ದಾರೆ.
ಈ ವಾರದ ಆರಂಭದಲ್ಲಿ ಗೋವಾದಲ್ಲಿ ನಡೆದ 2024ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಪುಷ್ಪ-2 ಸಿನಿಮಾದಲ್ಲಿ ಅವರ ಸಂಭಾವನೆ ಬಗ್ಗೆ ಪ್ರಶ್ನೆ ಮಾಡಲಾಯಿತು. ಅದರಲ್ಲೂ ವಿಶೇಷವಾಗಿ ಪುಷ್ಪ ಚಿತ್ರಕ್ಕಾಗಿ ಬರೋಬ್ಬರಿ 10 ಕೋಟಿ ರೂ. ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಈ ಬಗ್ಗೆ ನೀವೇನಂತೀರಿ ಎಂದು ರಶ್ಮಿಕಾರನ್ನು ಕೇಳಲಾಯಿತು.
ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ನಾನು ಅದನ್ನು ಒಪ್ಪುವುದೇ ಇಲ್ಲ, ಏಕೆಂದರೆ ಅದು ನಿಜವಲ್ಲ ಎನ್ನುವ ಮೂಲಕ ವದಂತಿಗೆ ತೆರೆಎಳೆದರು. ಆದರೆ, ಈಗಲೂ ರಶ್ಮಿಕಾ 10 ಕೋಟಿ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಪುಷ್ಪ ಭಾಗ 1ರಲ್ಲಿ ರಶ್ಮಿಕಾ ಅವರು 2 ಕೋಟಿ ರೂ. ಸಂಭಾವನೆ ಪಡೆದಿದ್ದರು.
ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇದೇ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಯಶಸ್ಸಿನಿಂದಾಗಿ ಈ ಸಿನಿಮಾ ಭಾರಿ ಕ್ರೇಜ್ ಹುಟ್ಟುಹಾಕಿದೆ.
ರಶ್ಮಿಕಾ ಸಿನಿಮಾ ವಿಚಾರಕ್ಕೆ ಬರುವುದಾದರೆ, ಪುಷ್ಪ 2 ಇನ್ನೇನು ಬಿಡುಗಡೆಯಾಗಲಿದೆ. ಇದಲ್ಲದರೆ, ಕುಬೇರ ಚಿತ್ರದಲ್ಲಿ ಧನುಷ್ ಜತೆ ಮತ್ತು ಸಿಕಂದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ನಟಿಸಿದ್ದಾರೆ. (ಏಜೆನ್ಸೀಸ್)
ಸಾಯಲು ಹೊರಟಿದ್ದ ನನ್ನನ್ನು ಅಂದು ಕಾಪಾಡಿದ್ದೆ ನಯನತಾರಾ! ಖ್ಯಾತ ನಟನ ಹೇಳಿಕೆ ವೈರಲ್ | Nayanthara
ಕಪ್ಪು ಕಲೆ ಇರುವ ಈರುಳ್ಳಿ ಬಳಸಿದರೆ ಏನಾಗುತ್ತದೆ? ಎಷ್ಟು ಡೇಂಜರ್? ಇಲ್ಲಿದೆ ಉಪಯುಕ್ತ ಮಾಹಿತಿ | Black Spot Onion