ಪಶ್ಚಿಮ ಬಂಗಾಳ: ಕಳೆದ ಅಕ್ಟೋಬರ್ನಲ್ಲಿ 9 ವರ್ಷದ ಬಾಲಕಿ ಮೇಲೆ 19 ವರ್ಷ ಯುವಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಕ್ಕಾಗಿ ಇಲ್ಲಿನ ಕೋರ್ಟ್ ಮರಣ ದಂಡನೆ ವಿಧಿಸಿದ್ದು, ಅಪರಾಧ ನಡೆದ ಕೇವಲ 61 ದಿನಗಳಲ್ಲಿ(ರಾಜ್ಯದ ತ್ವರಿತಗತಿ ಪ್ರಕರಣ) ಶಿಕ್ಷೆ ನೀಡಿದ ಪ್ರಕರಣ ಇದಾಗಿದೆ.
ಪಶ್ಚಿಮ ಬಂಗಾಳದ 24 ಪರಗಣ ಪ್ರದೇಶದ ಜಯನಗರದಲ್ಲಿ ಇದೇ ಅಕ್ಟೋಬರ್ 4 ರಂದು ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿದೆ. ಆರೋಪಿಯನ್ನು ಮುಸ್ತಾಕಿನ್ ಸರ್ದಾರ್ ಎಂದು ಗುರುತಿಸಲಾಗಿದೆ. ಪ್ರಕರಣ ನಡೆದ ಕೆಲವೇ ಕ್ಷಣಗಳಲ್ಲಿ ಪಾಲಕರು ದೂರು ನೀಡಿದ್ದು, ಸುತ್ತಮುತ್ತಲಿನ ಸಿಸಿಟಿವಿಗಳು ಆಧಾರಿಸಿ 2.5 ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: ಟ್ರಕ್ಗೆ ಸ್ಲೀಪರ್ ಬಸ್ ಡಿಕ್ಕಿ! 8 ಜನರ ದುರ್ಮರಣ, 19ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ | Sleeper Bus
ವಿಚಾರಣೆ ಸಮಯದಲ್ಲಿ ಆರೋಪಿ ಅಪರಾಧ ಒಪ್ಪಿಕೊಂಡಿದ್ದು, 25 ದಿನಗಳಲ್ಲಿ ಪ್ರಕರಣ ಪೂರ್ಣಗೊಳಿಸಿ ನ್ಯಾಯಾಲಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದೇ ನ.04ರಂದು ಕೋರ್ಟ್ ವಿಚಾರಣೆ ಪ್ರಾರಂಭವಾಗಿ 36 ಸಾಕ್ಷ್ಯಳನ್ನು ಆಧಾರಿಸಿ ಪೀಠ ಶಿಕ್ಷೆ ವಿಧಿಸಿದೆ.
ಕೋರ್ಟ್ ನೀಡಿರುವ ತೀರ್ಪನ್ನು ವೆಸ್ಟ್ ಬೆಂಗಾಲ್ ಸಿಎಂ ಮಮತಾ ಬ್ಯಾನರ್ಜಿ ಶ್ಲಾಘೀಸಿದ್ದಾರೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಇಂತಹ ಪ್ರಕರಣದಲ್ಲಿ ಅಪರಾಧಿ ಮತ್ತು ಮರಣದಂಡನೆ ರಾಜ್ಯದ ಇತಿಹಾಸದಲ್ಲಿ ಅಭೂತಪೂರ್ವವಾಗಿದೆ ಎಂದು ಹೇಳಿದರು,(ಏಜೆನ್ಸೀಸ್).
ಅಕ್ರಮ ಮೀನುಗಾರಿಗೆ ಆರೋಪ; 14 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ