ಟ್ರಕ್​ಗೆ ಸ್ಲೀಪರ್​ ಬಸ್​​ ಡಿಕ್ಕಿ! 8 ಜನರ ದುರ್ಮರಣ, 19ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ | Sleeper Bus

sleeper bus
Published on

ಉತ್ತರ ಪ್ರದೇಶ: ಇಲ್ಲಿನ ಕನ್ನೌಜ್​ ಜಿಲ್ಲೆಯ ಔರಯಾ ಗಡಿಯ ಸಮೀಪದ ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಶುಕ್ರವಾರ(ಡಿ.06) ಸ್ಲೀಪರ್(Sleeper Bus)​ ಬಸ್​​ ಮತ್ತು ಟ್ರಕ್​ ನಡುವೆ ಸಂಭಂವಿಸಿದ ಅಫಘಾತದಲ್ಲಿ 8 ಜನರು ಮೃತಪಟ್ಟಿದ್ದು, 19ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ನೋದಿಂದ ದೆಹಲಿಗೆ 40 ಪ್ರಯಾಣಿಕರನ್ನು ಹೊತ್ತು ಹೊರಡುತ್ತಿದ್ದ ಸ್ಲೀಪರ್​ ಬಸ್​ ಮುಂಜಾನೆ 4.30ರ ಸುಮಾರಿಗೆ ಭಾರಿ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಪೊಲೀಸ್​ ತಂಡ ಮತ್ತು ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಸೈಫಾಯಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್​ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಇದೇ ಹೆದ್ದಾರಿಯ ಮೂಲಕ ಸಾಗುತ್ತಿದ್ದ ಜಲಸಂಪನ್ಮೂಲ ಸಚಿವ ಸ್ವತಂತ್ರ ದೇವ್​ ಸಿಂಗ್ ಕೂಡ ಕಾರಿನಿಂದ ಇಳಿದು ಸಹಾಯ ಮಾಡಿದರು ಎಂದು ವರದಿಗಳು ಉಲ್ಲೇಖಿಸಿವೆ.​​

ಈ ಘಟನೆಯೂ ಯಾವ ಕಾಣಕ್ಕೆ ಸಂಭಂವಿಸಿದೆ ಎಂದು ತನಿಖೆ ಮಾಡಲಾಗುವುದು ಎಂದು ವರದಿಯಾಗಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net